ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ನಟ ದರ್ಶನ್ ವಿವಿಧೆಡೆ ಪ್ರಚಾರ ನಡೆಸಿದ್ದಾರೆ.
ಕೆಆರ್ ನಗರದ ಗಾಯನಹಳ್ಳಿಯಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ದರ್ಶನ್, ‘ಯಜಮಾನ’ ಸಿನಿಮಾದ ಡೈಲಾಗ್ ಹೇಳಿದ್ದಾರೆ. ‘ಹೇಯ್ ಕ್ಯಾಡ್ಬರಿ, ಆನೆ ನಡೆದಿದ್ದೇ ದಾರಿ. ಬರ್ತಾ ಇದ್ದಾರೆ.’ ಎಂದು ಅರ್ಧಕ್ಕೆ ಡೈಲಾಗ್ ನಿಲ್ಲಿಸಿದ್ದಾರೆ.
ಪ್ರಚಾರದ ವೇಳೆ ಅವರು ‘ಹೇಯ್ ಕ್ಯಾಡ್ಬರಿ, ಆನೆ ನಡೆದಿದ್ದೇ ದಾರಿ. ಬರ್ತಾ ಇದ್ದಾರೆ.’ ಇನ್ಮುಂದೆ ಡೈಲಾಗ್ ಹೇಳಿದರೆ ಕಾಂಟ್ರವರ್ಸಿ ಆಗುತ್ತೆ ಎಂದು ಅರ್ಧಕ್ಕೆ ಡೈಲಾಗ್ ನಿಲ್ಲಿಸಿದ್ದಾರೆ. ಸುಮಲತಾ ಅವರ ಕ್ರಮ ಸಂಖ್ಯೆ ಮತ್ತು ಚಿಹ್ನೆ ಬಗ್ಗೆ ತಿಳಿಸಿದ ಅವರು, ಯುವಕರು ಸುಮಲತಾ ಅವರ ಗುರುತಿನ ಬಗ್ಗೆ ತಿಳಿ ಹೇಳಬೇಕೆಂದು ಮನವಿ ಮಾಡಿದ್ದಾರೆ.