ಪ್ರಜ್ವಲ್‍ರನ್ನು ಏರ್‌ ಪೋರ್ಟ್‌ ನಲ್ಲೇ ವಶಕ್ಕೆ ಪಡೆಯಲು ವಾರೆಂಟ್ ಜಾರಿ !

Date:

ಬೆಂಗಳೂರು: ಪ್ರಜ್ವಲ್‍ರ ನ್ನು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‍ʼರನ್ನು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ. ಬಳಿಕ ಕಾನೂನು ಪ್ರಕಾರ ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಪ್ರಜ್ವಲ್ ವಾಪಸ್ ಆಗುವ ಹಿನ್ನೆಲೆಯಲ್ಲಿ ಎಸ್‍ಐಟಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಬೇರೆ ದೇಶಕ್ಕೆ ಹೋಗಿ ನಾವು ಅರೆಸ್ಟ್ ಮಾಡುವಂತಿಲ್ಲ.
ಆ ರೀತಿ ಮಾಡಲು ಬರಲ್ಲ. ಕೇಂದ್ರ ಸರ್ಕಾರ ಕೂಡ ಯಾರನ್ನಾದರೂ ಕಳುಹಿಸಿ ಅರೆಸ್ಟ್ ಮಾಡಲು ಆಗಲ್ಲ. ಇಂಟರ್ ಪೋಲ್ ಕೂಡ ಇರೋದೆ ಅದಕ್ಕಾಗಿ. ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿಕೊಂಡು ಬಂದಂಗೆ ಅಲ್ಲ. ಕಾನೂನು ಪ್ರಕಾರ ವಾರೆಂಟ್ ಜಾರಿಯಾಗಿದೆ. ಅದರಂತೆ ಏರ್‌ಪೋರ್ಟ್‌ನಲ್ಲೇ ಬಂಧನವಾಗಬೇಕು. ಬಂಧನಕ್ಕೆ ಅದರದ್ದೇ ಆದ ಪ್ರಕ್ರಿಯೆ ಇದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಪಾಸ್‌ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕಾನೂನು ಪ್ರಕ್ರಿಯೆ ನೋಡಿ ರದ್ದು ಮಾಡ್ತಾರೆ. ಈ ಪ್ರಕ್ರಿಯೆಯಲ್ಲಿ ನಿಧಾನಗತಿ ಆಗಿದೆ. ಈಗ ರದ್ದು ಮಾಡುತ್ತೇವೆ ಎಂದಿದ್ದಾರೆ. ಪ್ರಜ್ವಲ್ ಪ್ರಕರಣ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತೆ ಎಂಬ ಬಗ್ಗೆ ಗೊತ್ತಿಲ್ಲ. ಕಾನೂನು ಪ್ರಕಾರ ಎಲ್ಲಾ ಕ್ರಮವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...