ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸೋದು ಖಚಿತ ಎಂದು ಹೇಳಲಾಗುತ್ತಿದೆಯಾದರೂ..ಕೊನೆ ಕ್ಷಣದಲ್ಲಿ ಇದು ಬದಲಾಗುವ ಸಾಧ್ಯತೆ ದಟ್ಟವಾಗಿದೆ.
ಮಂಡ್ಯದಲ್ಲಿ ಸುಮಲತಾ ಪರ ಅಲೆ ಎದ್ದಿದೆ. ಸುಮಲತಾ ಅವರಿಗೆ ಭಾರೀ ಬೆಂಬಲ ಸಿಗುತ್ತಿದ್ದು, ನಿಖಿಲ್ ಸ್ಪರ್ಧೆಗೆ ಬಹಳ ವಿರೋಧ ವ್ಯಕ್ತವಾಗುತ್ತಿದೆ.
ಸುಮಲತಾ ಅವರು ಪಕ್ಷೇತರರಾಗಿ ನಿಂತು, ಗೆಲುವು ಪಡೆದು ಬಿಜೆಪಿ ಸೇರಿದರೂ ಅಥವಾ ಈಗಲೇ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರೂ ಜೆಡಿಎಸ್, ಕಾಂಗ್ರೆಸ್ ಗೆ ದೊಡ್ಡ ಹೊಡೆತ ಹಾಗೂ ಮುಜುಗರ.ಸಿಎಂ ಮಗನ ರಾಜಕೀಯದ ಆರಂಭದಲ್ಲೇ ಸೋಲು ಕಾಣಬೇಕಾಗುತ್ತದೆ ಎನ್ನುವುದಕ್ಕಿಂತ ಮಿಗಿಲಾಗಿ ಜೆಡಿಎಸ್ ಒಂದು ಕ್ಷೇತ್ರವನ್ನು ಕಳೆದುಕೊಂಡಂತೆ ಆಗುತ್ತದೆ.
ಆದ್ದರಿಂದ ಜೆಡಿಎಸ್ ಮರ್ಯಾದಿ ಉಳಿಸಿಕೊಳ್ಳಲು ನಿಖಿಲ್ ಅವರನ್ನು ಮಂಡ್ಯ ಕಣದಿಂದ ಹಿಂದೆ ಸರಿಸಬಹುದು. ಸುಮಲತಾ ಅವರಿಗೆ ಕಾಂಗ್ರೆಸ್ ಅಥವಾ ಹೆಚ್ಚಾಗಿ ಜೆಡಿಎಸ್ ನಿಂದ ಟಿಕೆಟ್ ಕೊಟ್ಟರೂ ಕೊಡಬಹುದು. ಆದರೆ ನಾಯಕರಿಂದ ಅವಮಾನಿತರಾಗಿರುವ ಸುಮಲತಾ ಅವರ ಮನವೊಲಿಸುವುದು ಅಷ್ಟು ಸುಲಭವೂ ಅಲ್ಲ.
ಇನ್ನು ನಿಖಿಲ್ ಅವರನ್ನು ಮಂಡ್ಯ ಬಿಟ್ಟರೆ ಮೈಸೂರು -ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಗನನ್ನು ಅಖಾಡಕ್ಕೆ ಇಳಿಸುವ ಯೋಚನೆಯನ್ನು ಸಿಎಂ ಮಾಡಿದ್ರೂ ಅಚ್ಚರಿಯಿಲ್ಲ. ಸಿಂಹದ ಗುಹೆಗೆ ನುಗ್ಗಿ ನಿಖಿಲ್ ಜಯಿಸುತ್ತಾರಾ ಅನ್ನೋದು ಕೂಡ ಪ್ರಶ್ನೆ. ಒಂದರರ್ಥದಲ್ಲಿ ನಿಖಿಲ್ ಗೆ ಮಂಡ್ಯಕ್ಕಿಂತ ಮೈಸೂರೇ ಬೆಸ್ಟ್ ಅನ್ನೋದು ಕೆಲವರ ಅಭಿಪ್ರಾಯ.
ಪ್ರತಾಪ್ ಸಿಂಹ ವಿರುದ್ಧ ಮಗನನ್ನೇ ಅಖಾಡಕ್ಕೆ ಇಳಿಸ್ತಾರಾ ಸಿಎಂ?
Date: