ಪ್ರತಿದಿನ ಬಿಸಿ ನೀರಿನ ಸೇವನೆಯಿಂದ ಯಾವೆಲ್ಲಾ ಲಾಭಗಳಿವೆ ಗೊತ್ತಾ?
ನಮ್ಮಲ್ಲಿ ಹೆಚ್ಚಿನವರು ಹಗಲಿನಲ್ಲಿ ಸರಿಯಾಗಿ ನೀರು ಕುಡಿಯುವುದಿಲ್ಲ. ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳು ತಿಳಿದರೆ ಶಾಕ್ ಆಗುತ್ತೀರಿ.
ಚಳಿಗಾಲದಲ್ಲಿ ಅಥವಾ ಶೀತವಾದಾಗ ಮೂಗು ಕಟ್ಟಿಕೊಳ್ಳುವ, ಗಂಟಲು ಕೆರೆತದ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಪರಿಹಾರವಾಗಿ ಬಿಸಿ ನೀರಿನ ಸೇವನೆಯನ್ನು ಮಾಡಬಹುದು.
ದೇಹದಲ್ಲಿ ನೀರಿನ ಕೊರತೆಯಾದಾಗ ಮಲಬದ್ಧತೆ ಉಂಟಾಗುವುದು ಸಾಮಾನ್ಯ. ಇದು ಬಿಸಿ ನೀರಿನ ಸೇವನೆಯಿಂದ ಶಮನವಾಗುತ್ತದೆ.
ಕೂದಲಿನ ಆರೋಗ್ಯಕ್ಕೂ ಬಿಸಿ ನೀರಿನ ಸೇವನೆ ಒಳ್ಳೆಯದು. ಮೃದು ಕೂದಲನ್ನು ಪಡೆಯಲು ಪ್ರತಿದಿನ ತಪ್ಪದೆ ಬಿಸಿ ನೀರನ್ನು ಸೇವಿಸಿ.
ತ್ವಚೆಯ ಆರೋಗ್ಯಕ್ಕೂ ಬಿಸಿ ನೀರಿನ ಸೇವನೆ ಒಳ್ಳೆಯದು. ಕ್ರಮೇಣವಾಗಿ ಮುಖದ ಮೇಲಿನ ಕಪ್ಪು ಕಲೆ, ಸುಕ್ಕುಗಟ್ಟಿದ ಚರ್ಮವನ್ನು ಬಿಸಿ ನೀರಿನ ಸೇವೆನೆಯಿಂದ ಹೋಗಲಾಡಿಸಬಹುದು.
ಮುಟ್ಟಿನ ದಿನಗಳಲ್ಲಿ ಕಾಡುವ ಹೊಟ್ಟೆನೋವಿಗೆ ಬಿಸಿ ನೀರು ಉಪಯುಕ್ತವಾಗಿದೆ. ಬಿಸಿ ನೀರು ನೋವನ್ನು ಶಮನಗೊಳಿಸಿ ಆರಾಮದಾಯಕ ಅನುಭವವನ್ನು ನೀಡುತ್ತದೆ.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಸಿಡಿಟಿ, ಹೊಟ್ಟೆ ಉಬ್ಬರದಂತಹ ಅನಾರೋಗ್ಯ ಸಮಸ್ಯೆಗಳಿಗೆ ಬಿಸಿ ನೀರು ಉತ್ತಮ ಮನೆ ಮದ್ದಾಗಿದೆ.