ಪ್ರತಿದಿನ ಶುಂಠಿ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ? ಇಲ್ಲಿದೆ ಮಾಹಿತಿ
ಹಲವಾರು ಆರೋಗ್ಯಕರ ಗುಣಗಳನ್ನು ಒಳಗೊಂಡಿರುವ ಗಿಡಮೂಲಿಕೆ ಪದಾರ್ಥದಲ್ಲಿ ಶುಂಠಿ ಕೂಡ ಒಂದು. ಆಹಾರದ ರುಚಿಗಾಗಿ ಮತ್ತು ನಮ್ಮ ಆರೋಗ್ಯಕ್ಕಾಗಿ ಶುಂಠಿಯನ್ನು ಉಪಯೋಗಿಸುತ್ತೇವೆ. ಶುಂಠಿ ದೀರ್ಘಕಾಲದ ಅಜೀರ್ಣದಿಂದ ಉಂಟಾಗುವ ಹೊಟ್ಟೆಯ ಅಸ್ವಸ್ಥತೆ ಮತ್ತು ನೋವಿನಿಂದ ನಿಮ್ಮನ್ನು ನಿವಾರಿಸುತ್ತದೆ. ನಿಮ್ಮ ಊಟಕ್ಕೆ ಮುಂಚಿತವಾಗಿ ಒಣ ಶುಂಠಿಯ ಪುಡಿಯನ್ನು ನೀವು ತೆಗೆದುಕೊಂಡರೆ, ಅದು ಹೊಟ್ಟೆಯನ್ನು 50 ಪ್ರತಿಶತದಷ್ಟು ಖಾಲಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮಾರಣಾಂತಿಕ ಹೃದಯ ಕಾಯಿಲೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಶುಂಠಿ ಪುಡಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ತಾಜಾ ಶುಂಠಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಡಿಮೆಯಾಗುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಬಿಸಿ ಚಹಾದೊಂದಿಗೆ ಒಟ್ಟಿಗೆ ತೆಗೆದುಕೊಳ್ಳಬೇಕು.
ಶುಂಠಿಯು ಶೀತ, ಕೆಮ್ಮು ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಬೆವರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಮೈಗ್ರೇನ್ ನೋವಿಗೆ ಹಸಿ ಶುಂಠಿ ಸೇವನೆ ತುಂಬಾ ಪ್ರಯೋಜನಕಾರಿ ಆಗಿದ್ದು, ಮೈಗ್ರೇನ್ ಇರುವವರು ಪ್ರತಿದಿನ ಹಸಿ ಶುಂಠಿಯನ್ನು ಸೇವಿಸಬೇಕು. ದಣಿವು ನಿವಾರಣೆಗೆ ಶುಂಠಿ ಸೇವನೆ ಉತ್ತಮವಾಗಿದೆ.
ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇವೆ. ಹೀಗಾಗಿ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೆ ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯಕವಾಗಿದೆ.