ಪ್ರತಿ ದಿನ 150 ಮಂದಿಗೆ ಊಟ ಹಾಕುವ ಇವರೇನು ಶ್ರೀಮಂತರಲ್ಲ..!

Date:

ಅಜರ್ ಮಕ್ಸುಸಿ, 36 ವರ್ಷ ವಯಸ್ಸಿನ ಇವರು ಹೈದ್ರಾಬಾದ್ ಮೂಲದವರು. ಪ್ರತಿನಿತ್ಯ 100 ರಿಂದ 150 ಮಂದಿ ಊಟ ಹಾಕುತ್ತಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಬಡವರ ಪಾಲಿಗೆ ಅನ್ನದಾತರಾಗಿರುವ ಅಜರ್ ಓಲ್ಡ್ ಹೈದ್ರಾಬಾದ್ನ ದಬೀಪುರ ಫ್ಲೈ ಓವರ್ ಅಡಿಯಲ್ಲಿ ಕಳೆದ 3 ವರ್ಷಗಳಿಂದ ನಿರಾಶ್ರಿತರ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ.

ಬಡತನ ಮತ್ತು ಹಸಿವಿನ ಅರಿವಿರುವ ಅಜರ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಇಂಟೀರಿಯಲ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಕೆಲ ವರ್ಷದ ಹಿಂದೆ ರೈಲ್ವೇ ಸ್ಟೇಷನ್ ಬಳಿ ವಿಕಲಚೇತನ ಮಹಿಳೆ ಲಕ್ಷ್ಮೀ, ಎಂಬುವರನ್ನ ನೋಡಿದಾಗಿನಿಂದ ಬಡವರಿಗೆ ಊಟ ಹಾಕಲು ಪ್ರಾರಂಭಿಸಿದರಂತೆ. ಆ ಮಹಿಳೆ ಅನ್ನ ಸೇವಿಸಿ ಆದೆಷ್ಟೋ ದಿನಗಳೇ ಕಳೆದು ಹೋಗಿದ್ದವು.


ನ್ಯೂಸ್ ಪೇಪರ್ ವೊಂದರ ಸಂದರ್ಶನದಲ್ಲಿ ಹಳೆಯದನ್ನ ನೆನಪು ಮಾಡಿಕೊಳ್ಳುವ ಅಜರ್ ‘ ಒಂದು ದಿನ ಅವರ ಪತ್ನಿ ಸುಮಾರು 15 ಜನರಿಗೆ ಆಗುವಷ್ಟು ಆಹಾರ ತಯಾರಿಸಿದ್ದರಂತೆ. ಆ ಊಟವನ್ನ ಅಜರ್ ಅವರು, ಫ್ಲೈ ಓವರ್ ಕೆಳಗೆ ವಾಸಿಸುವ ನಿರಾಶ್ರಿತರಿಗೆ ಹಂಚಿದರಂತೆ ಹೀಗೆ ಕೆಲವೇ ದಿನಗಳಲ್ಲಿ ಅಜರ್ ಪ್ರತಿನಿತ್ಯ ನಿರಾಶ್ರಿತರ ಹಸಿವನ್ನ ಇಂಗಿಸಲು ಮುಂದಾದ್ರು.
ಇಂದು ಅವರು ಪ್ರತಿನಿತ್ಯ 1500 ರಿಂದ 1700 ರಷ್ಟು ಹಣವನ್ನ ಅನ್ನದಾನಕ್ಕಾಗಿ ಖರ್ಚು ಮಾಡುತ್ತಾರೆ. ಬಹುತೇಕ ಹಣ ಅವರ ಜೇಬಿನಿಂದಲೇ ಖರ್ಚಾಗುತ್ತಿದ್ದು, 25 ಕೆಜಿ ಅಕ್ಕಿ, 2 ಕೆಜಿ ಧಾನ್ಯಗಳು, 1 ಲೀಟರ್ ಆಯಿಲ್ ಮತ್ತು ಸಾಂಬಾರು ಪದಾರ್ಥಗಳನ್ನ ಖರೀದಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಅಜರ್, ಈ ಸಾಮಾಜಿಕ ಸೇವೆಗೆ ಸ್ನೇಹಿತರು ಕೈ ಜೋಡಿಸಿರೋದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ‘ಅನೇಕ ಜನರು ತಮಗೆ ಈ ಕೆಲಸಕ್ಕೆ ಕೈ ಜೋಡಿಸಿದ್ರು ಮತ್ತು ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ರು, ಆದ್ರೆ ಹಣದ ಮೂಲಕ ಸಹಾಯ ಮಾಡುವವರನ್ನ ನಿರಾಕರಿಸುತ್ತಾರೆ.

ನೋಡಿ, ಅಜರ್ ಅವರು, ದಾನಿಗಳಿಂದ ಹಣ ನಿರಾಕರಿಸಲು ಕಾರಣವೂ ಉಂಟು. ನಿರಾಶ್ರಿತರು ಊಟವಿಲ್ಲದೆ, ಬಟ್ಟೆಯಿಲ್ಲದೆ ಪರದಾಡುತ್ತಿರುತ್ತಾರೆ ನಿಜ. ಆದರೆ, ಅಂತವರಿಗೆ ಹಣ ನೀಡುವುದು ಸರಿಯಲ್ಲ. ಹಣ ನೀಡಿದ್ದೇ ಆದಲ್ಲಿ ಕುಡಿತದ ಚಟಕ್ಕೆ ಬಳಸುತ್ತಾರೆ. ಹೀಗಾಗಿಯೇ ಅಜರ್ ನಿರಾಶ್ರಿತ ಜನರಿಗೆ ಪ್ರತಿನಿತ್ಯವೂ ಅನ್ನ ಸಂತರ್ಪಣೆ ಮುಂದಾಗಿದ್ದಾರೆ.
ಅಜರ್ ಅವರ ಬಳಿ ಯಾರೇ ಹಸಿವು ಅಂತಾ ಬಂದರು ಒಂದು ಹೊತ್ತಿನ ಊಟವನ್ನಾದ್ರು ಕೊಟ್ಟು ಕಳುಹಿಸುತ್ತಾರೆ. ಒಟ್ಟಿನಲ್ಲಿ ಅಜರ್ ಮಕ್ಸುಸಿರ ಈ ಸಾಮಾಜಿಕ ಸೇವೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ವಿಭಿನ್ನವಾಗಿ ಯೋಚಿಸುವ ಮೂಲಕ ಬಡವರಿಗೆ, ನಿರಾಶ್ರಿತರಿಗೆ ನೆರವು ಒದಗಿಸಿ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....