ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರ್ ನಿರ್ಮಾಣದ ಕೆಜಿಎಫ್ -2 ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈಗಾಗಲೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಬಾಲಿವುಡ್ ನಟಿ ರವೀನಾ ಟಂಡನ್ ತಂಡ ಕೂಡಿಕೊಂಡಿದ್ದಾರೆ.
ಈ ನಡುವೆ ಯಶ್ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನಲ್ಲ ಕೆಜಿಎಫ್ ಪ್ರಧಾನಿ ರಿಮಿಕಾ ಸೇನ್ ಅವರನ್ನು. ನಟಿ ರವೀನಾ ಟಂಡನ್ ರಿಮಿಕಾ ಸೇನ್ ಎಂಬ ಹೆಸರಲ್ಲಿ ಪ್ರಧಾನಮಂತ್ರಿಗಳ ಪಾತ್ರಕ್ಕೆ ಜೀವ ತುಂಬುತ್ತಿದ್ದು, ರಾಕೀಭಾಯ್ ಆ ಪ್ರಧಾನಿಯನ್ನು ಭೇಟಿಮಾಡಿದ್ದಾರೆ.
ರವೀನಾ ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅವರು, “ಪ್ರಧಾನಮಂತ್ರಿ ರಮಿಕಾ ಸೇನ್ ಅವರನ್ನು ರಾಕಿ ಬೌಂಡ್ರಿಯೊಳಗೆ ಬರಲು ಸ್ವಾಗತ ಕೋರದಿರಬಹುದು. ಆದರೆ, ರವೀನಾ ಟಂಡನ್ ಅವರನ್ನು ಯಶ್ ಹೋಮ್ಟೌನಿಗೆ ಸ್ವಾಗತ ಮಾಡಲೇಬೇಕು. ನೀವು ಚಿತ್ರತಂಡ ಸೇರಿದ್ದು ಸಂತಸ ತಂದಿದೆ. ಸ್ವಾಗತ” ಎಂದು ಯಶ್ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ.
ಪ್ರಧಾನಿಯನ್ನು ಭೇಟಿ ಮಾಡಿದ ರಾಕಿಂಗ್ ಸ್ಟಾರ್ ಯಶ್ ಏನಂತ ಹೇಳಿದ್ದಾರೆ ಗೊತ್ತಾ?
Date: