ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೂಲ್ಯ ಕ್ಷಣಗಳ ವಿಡಿಯೋ ಇದೀಗ ವೈರಲ್ ಆಗಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸಗಳ ಮಧ್ಯೆಯೂ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಅದರಲ್ಲಿ ಈ ನವಿಲುಗಳಿಗೆ ಆಹಾರ ಹಂಚುವುದು ಸಹ ಒಂದು. ಇದೀಗ ಮೋದಿ ನವಿಲುಗಳಿಗೆ ಆಹಾರ ಹಂಚುವ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ಹಂಚಿದ್ದು, ಈ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಅಪಾರ ಜನಮೆಚ್ಚುಗೆ ಪಡೆದಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿಯವರ ವಾಡಿಕೆಯ ವ್ಯಾಯಾಮದ ಸಮಯದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
https://twitter.com/narendramodi/status/1297445645075136512?s=20
ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಅವರ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ‘ಅಮೂಲ್ಯ ಕ್ಷಣಗಳು’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಮೋದಿ ಅವರೇ ಪೋಸ್ಟ್
ಮಾಡಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗಿನ ವಾಯು ವಿಹಾರದ ಕೆಲವು ದೃಶ್ಯಗಳುಳ್ಳ ಸುಮಾರು ಎರಡು ನಿಮಿಷದವರೆಗಿನ ಈ ವಿಡಿಯೋದಲ್ಲಿ ನವಿಲುಗಳಿಗೆ ಮೋದಿ ಅವರು ಕಾಳು ಹಾಕುತ್ತಿರುವ ದೃಶ್ಯಗಳಿವೆ.
ಅಲ್ಲದೆ ತಮ್ಮ ನಿವಾಸದಿಂದ ಕಚೇರಿವರೆಗೆ ಬೆಳಗಿನ ವಾಯುವಿಹಾರದ ದೃಶ್ಯ ತುಣುಕುಗಳಿವೆ. ಮೋದಿ ಅವರು ತಮ್ಮ ನಿವಾಸದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವಂತೆ ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವಂತಹ ರಚನೆಯನ್ನು ನಿರ್ಮಿಸಿದ್ದು,
ಇಲ್ಲಿ ಅನೇಕ ಹಕ್ಕಿಗಳು ಗೂಡು ಕಟ್ಟಿವೆ. ಇನ್ನೂ,ಬೆಳಗ್ಗಿನ ಸಂದರ್ಭದಲ್ಲಿ ನವಿಲುಗಳು ಸಾಮಾನ್ಯವೆಂಬಂತೆ ಕಂಡುಬರುತ್ತದೆ. ಪ್ರಧಾನಿ ಮೋದಿ ನಿವಾಸದಲ್ಲಿ ಹಲವು ಪಕ್ಷಿಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಈ ವಿಡಿಯೋದಲ್ಲಿ ಪ್ರಧಾನಿ ಹಿಂದಿ ಕವನವೊಂದನ್ನು ವಾಚಿಸಿರುವುದು ಸಹ ಕಾಣಬಹುದು.
https://twitter.com/narendramodi/status/1297375307347845120?s=20
ಇನ್ನೂ , ಇಂದು ಮುಂಜಾನೆಯಷ್ಟೇ, ಪ್ರಧಾನಿ ಮೋದಿ, ನುವಾಖೈ ಜುಹಾರ್ ಹಬ್ಬದ ಸಂದರ್ಭದಲ್ಲಿ ರೈತರಿಗೆ ಶುಭಾಶಯಗಳನ್ನು ಕೋರಿದ್ದರು. ಇದೊಂದು ಕೃಷಿ ಉತ್ಸವವಾಗಿದ್ದು, ಪಶ್ಚಿಮ ಒಡಿಶಾ ಮತ್ತು ಚತ್ತಿಸ್ ಗಢದಲ್ಲಿ ಆಚರಿಸಲಾಗುತ್ತದೆ.
ರೈತರ ಶ್ರಮ ಅಪಾರವಾದದ್ದು, ಇವರ ಪ್ರಯತ್ನದಿಂದಾಗಿ ನಮ್ಮ ರಾಷ್ಟ್ರಕ್ಕೆ ಆಹಾರ ಪೂರೈಕೆಯಾಗುತ್ತಿದೆ. ಈ ಶುಭ ದಿನ ಎಲ್ಲರಿಗೂ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ನುವಾಖೈ ಜುಹಾರ್! ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.