ಪ್ರಧಾನಿ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ರೆ ಕಾಂಗ್ರೆಸ್ ನಿಂದ ಅಖಾಡಕ್ಕೆ ಇಳಿಯೋದು ಅಂತಿಂಥವರಲ್ಲ…!

Date:

ಬೆಂಗಳೂರು ದಕ್ಷಿಣದಿಂದ ಪ್ರಧಾನಮಂತ್ರಿ ನರೇಂದ್ರ‌ ಮೋದಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿದೆ. ಮೋದಿ ಸ್ಪರ್ಧೆ ಮಾಡುವ ಹಿನ್ನೆಲೆಯಲ್ಲಿಯೇ ಬೆಂಗಳೂರು ದಕ್ಷಿಣದ ಅಭ್ಯರ್ಥಿ ಹೆಸರನ್ನು ಘೋಷಿಸಲು ಬಿಜೆಪಿ ತಡಮಾಡುತ್ತಿದೆ.
ಇದೇ ಕಾರಣಕ್ಕೆ ಕಾಂಗ್ರೆಸ್ ಸಹ ತನ್ನ ‌ಕ್ಯಾಂಡಿಡೇಟ್ ಅನ್ನು ಪ್ರಕಟ ಮಾಡಿಲ್ಲ. ಬಿಜೆಪಿ ತನ್ನ ಸಮರಕಲಿಯನ್ನು ಘೋಷಣೆ ಮಾಡಿದ ಬಳಿಕ ತನ್ನ ಕಟ್ಟಾಳುವನ್ನು ಕಣಕ್ಕಿಳಿಸುವ ಉದ್ದೇಶವನ್ನು ಕೈ ಪಡೆ ಹೊಂದಿದೆ.
ಮೋದಿ ಸ್ಪರ್ಧಿಸಿದರೆ ಅವರಿಗೆ ಎದುರಾಳಿಯಾಗಿ ಅತ್ಯಂತ ಪ್ರಬಲ ನಾಯಕರನ್ನೇ ಕಣಕ್ಕಿಳಿಸ ಬೇಕಾಗುತ್ತದೆ ಕಾಂಗ್ರೆಸ್.
ಮೋದಿ ಬೆಂಗಳೂರು ದಕ್ಷಿಣದಿಂದ ಅಖಾಡಕ್ಕೆ‌ ಧುಮಿಕದರೆ ಅವರ ವಿರುದ್ಧ ಟ್ರಬಲ್ ಶೂಟ್ ಎಂದು ಕರೆಯಲ್ಪಡುವ ಕಾಂಗ್ರೆಸ್ ನ ನಾಯಕ , ಸಚಿವ ಡಿ.ಕೆ ಶಿವಕುಮಾರ್ ಅವರನ್ನು ರಣರಂಗಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಮೋದಿ ಹೆಸರು ಘೋಷಣೆ ಆದಮೇಲೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸಲಿದೆ.


ಸದ್ಯ ಬಿಜೆಪಿ 22 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮಂಡ್ಯದಲ್ಲಿ ಸುಮಲತಾ ಅವರಿಗೆ ತನ್ನ ಬೆಂಬಲ ನೀಡಲಿದೆ. 5 ಕ್ಷೇತ್ರದ ಅಭ್ಯರ್ಥಿಗಳನ್ನು ಇನ್ನೂ ಫೈನಲ್ ಮಾಡಿಲ್ಲ.
ಕಾಂಗ್ರೆಸ್ ತನ್ನ ಪಾಲಿನ 20 ಸೀಟ್ ಗಳಲ್ಲಿ 18 ಕ್ಷೇತ್ರಗಳ ಕ್ಯಾಂಡಿಡೇಟ್ ಗಳ ಹೆಸರನ್ನು ಅಂತಿಮಗೊಳಿಸಿದೆ. ಬೆಂಗಳೂರು ದಕ್ಷಿಣ ,ಧಾರವಾಡವನ್ನು ಕಾಯ್ದಿರಿಸಿದೆ.

Share post:

Subscribe

spot_imgspot_img

Popular

More like this
Related

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ...

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ ದೇವನಹಳ್ಳಿಬೆಂಗಳೂರು: ಕೆಂಪೇಗೌಡ...

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...