ಬೆಂಗಳೂರು ಪ್ರೆಸ್ಕ್ಲಬ್ ಪ್ರತಿ ವರ್ಷದಂತೆ ಈ ವರ್ಷ ಕೂಡ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಈ ಬಾರಿಯ ವರ್ಷದ ವ್ಯಕ್ತಿ ಗೌರವ ನೀಡಿದೆ.
ಅದೇರೀತಿ ಯುಗದ ಸಾಧಕ ಪ್ರಶಸ್ತಿಗೆ ಪ್ರೊ.ಜಿ ವೆಂಕಟ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 31, 2019ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ.
ಇದೇ ವೇಳೆ 2019ನೇ ಸಾಲಿನ ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತರನ್ನು ಪ್ರೆಸ್ಕ್ಲಬ್ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಜನಪ್ರಿಯ ನಿರೂಪಕ, ಸುವರ್ಣ ಸುದ್ದಿವಾಹಿನಿಯ ಪ್ರಸಕ್ತ ವಿದ್ಯಮಾನಗಳ ವಿಭಾಗದ ಸಂಪಾದಕ ಜಯಪ್ರಕಾಶ್ ಶೆಟ್ಟಿ, ರಾಜ್ನ್ಯೂಸ್ ಪ್ರಧಾನ ಸಂಪಾದಕರಾದ ಹಮೀದ್ ಪಾಳ್ಯ ಮೊದಲಾದವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವವರ ಪಟ್ಟಿ
ಎಂ. ಸಿದ್ದರಾಜು, ಸುನಿಲ್ ಪ್ರಸಾದ್, ಕೆ.ಹೆಚ್ ಸಾವಿತ್ರಿ, ಬಿ.ವಿ ನಾಗರಾಜ್, ರವೀಂದ್ರ ಜಿ. ಭಟ್, ಕೆ.ಎನ್ ಚೆನ್ನೇಗೌಡ, ಹರೀಶ್ಚಂದ್ರ ಭಟ್, ಅಬ್ದುಲ್ ಹಮೀದ್ ಎಂ (ಹಮೀದ್ ಪಾಳ್ಯ). ಇಮ್ರಾನ್ ಖುರೇಶಿ, ಜಿ.ಕೆ ಸತ್ಯ ಲಕ್ಷ, ಲಕ್ಷ್ಮಣ ಕೊಡಸೆ, ಜೋಸೆಫ್ ಹೂವಾರ್, ಎನ್ ಎಸ್ ಶಂಕರ್, ಬಿ ಕೆ ರವಿ, ರು. ಬಸಪ್ಪ, ಜಯಪ್ರಕಾಶ್ ಶೆಟ್ಟಿ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸಿ ಪಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಲಿದ್ದಾರೆ.