ಇವರು ಮದ್ರಾಸ್ ಯೂನಿವರ್ಸಿಟಿಯಲ್ಲಿ ಫೇಮಸ್ ಪ್ರೊಫೆಸರ್ ಆಗಿದ್ರು. ಕೈ ತುಂಬಾ ಸಂಬಳ. ಆದರೆ, ಆ ಪ್ರೊಫೆಸರ್ ಗಿರಿಗೆ ಗುಡ್ ಬೈ ಹೇಳಿ ಹೊಟೇಲ್ ಉದ್ಯಮಕ್ಕಿಳಿದ್ರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬ್ಯುಸಿನೆಸ್ ಆರಂಭಿಸಿದ್ರು. ಈಗ ಮಲ್ಟಿ ಮಿಲಿಯನ್ ಡಾಲರ್ ಬ್ರೆಡ್ ಉದ್ಯಮದ ಒಡೆಯ.
ಹೌದು, ಇವರ ಹೆಸರು ಎಂ.ಮಹಾದೇವನ್. ತಮಿಳುನಾಡಿನ ಚೆನ್ನೈನಲ್ಲಿ ಅತ್ಯಂತ ಚಿರಪರಿಚಿತ ವ್ಯಕ್ತಿ. ಇವರೀಗ ಪ್ರಸಿದ್ಧ ರೆಸ್ಟೋರೆಂಟ್ ಮಾಲೀಕ.. ಜೊತೆಗೆ ಬೇಕರ್ ಕೂಡ ಹೌದು. ಇವರನ್ನು ಎಲ್ಲರೂ ‘ ಹಾಟ್ ಬ್ರೆಡ್ ಮಹಾದೇವನ್ ಅಂತಾನೇ ಪ್ರೀತಿಯಿಂದ ಕರೀತಾರೆ.
ಕೊಯಮತ್ತೂರಿನಿಂದ 65 ಕಿಲೋ ಮೀಟರ್ ದೂರದಲ್ಲಿರುವ ಉಡುಮಲ್ಪೇಟ್ ಪ್ರೊ. ಎಂ. ಮಹದೇವನ್ ಅವರ ಹುಟ್ಟೂರು. ಅವರ ತಂದೆ-ತಾಯಿ ಇಬ್ಬರೂ ವೈದ್ಯರು. ಆದ್ರೆ ಮಹಾದೇವನ್ ಏಕೋ ವೈದ್ಯ ವೃತ್ತಿ ಆರಿಸಿಕೊಳ್ಳಲಿಲ್ಲ. ಅವರಿಗೆ ಮೊದಲಿನಿಂದ್ಲೂ ಉದ್ಯಮದ ಬಗ್ಗೆ ಆಸಕ್ತಿ.
ನೋಡಿ, ವಾಣಿಜ್ಯ ವಿಷಯದಲ್ಲೇ ಮಹಾದೇವನ್ ಪೋಸ್ಟ್ ಗ್ರಾಜ್ಯುಯೇಶನ್ ಮುಗಿಸಿದ್ರು. 1979ರಲ್ಲಿ ಸಹ ಪ್ರಾಧ್ಯಾಪಕರಾಗಿ ಮದ್ರಾಸ್ ವಿಶ್ವವಿದ್ಯಾನಿಲಯ ಸೇರಿದ ಮಹಾದೇವನ್ ಅವರಿಗೆ, ನಿಧಾನವಾಗಿ ರೆಸ್ಟೋರೆಂಟ್ ಆರಂಭಿಸಬೇಕೆಂಬ ಆಸೆ ಚಿಗುರಿತ್ತು. ಬಳಿಕ ಅವರು ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟು ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ್ರು.
ಪ್ರೊಫೆಸರ್ ಅವರು ಟೇಬಲ್ ಸ್ವಚ್ಛಗೊಳಿಸುವುದು, ಆಹಾರ ಸರ್ವ್ ಮಾಡೋದು ಅವರ ಕೆಲಸ. ಇದರ ಜೊತೆಜೊತೆಗೆ ರೆಸ್ಟೋರೆಂಟ್ ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನೂ ಅರ್ಥಮಾಡಿಕೊಂಡ್ರು. ಆರ್ಥರ್ ಹೈಲಿ ಅವರ ಹೋಟೆಲ್ ಪುಸ್ತಕವನ್ನು ಓದಿದಾಗಿನಿಂದ ಹೋಟೆಲ್ ಇಂಡಸ್ಟ್ರಿ ಬಗ್ಗೆ ಅವರಿಗೆ ಆಸಕ್ತಿ ಮೂಡಿತಂತೆ.
ಪ್ರೊ. ಎಂ. ಮಹದೇವನ್ ಅವರು ಮೊದಲು ಸಣ್ಣದಾಗಿ ಉದ್ಯಮ ಆರಂಭಿಸಿದ್ರು. ಈಗ ಅವರ ಉದ್ಯಮ ಈಗ ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ದಕ್ಷಿಣ ಭಾರತದಲ್ಲಿ ಮೂರು ಬಹುದೊಡ್ಡ ಕಂಪನಿಗಳ ಒಡೆಯರಾಗಿದ್ದಾರೆ. ಹಾಟ್ ಬ್ರೆಡ್ಸ್, ಕಾಪರ್ ಚಿಮ್ನಿ ಸೌತ್ ಇಂಡಿಯಾ” ಮತ್ತು ಓರಿಯಂಟಲ್ ಕ್ವಿಸಿನ್ಸ್ ಎಂಬ ಮೂರು ಕಂಪನಿಗಳಿವೆ.
ಪ್ರೊಫೆಸರ್ ಅವರ ಹಾಟ್ ಬ್ರೆಡ್ಸ್ , ಸದ್ಯ ಚೆನ್ನೈನಲ್ಲಿ ಮೂವತ್ತು ಹಾಟ್ ಬ್ರೆಡ್ಸ್ ಔಟ್ಲೆಟ್ಗಳಿವೆ. ಪುದುಚೆರಿಯಲ್ಲಿ ಎರಡು, ಪಶ್ಚಿಮ ಏಷ್ಯಾದಲ್ಲಿ 14, ಯುರೋಪ್ನಲ್ಲಿ ಒಂದು ಔಟ್ಲೆಟ್ ತೆರೆದಿದ್ದಾರೆ. ಇನ್ನು ಕಾಪರ್ ಚಿಮ್ನಿ ಸೌತ್ ಇಂಡಿಯಾ ಅಡಿಯಲ್ಲಿ ಹಲವು ಬೇಕರಿ ಹಾಗೂ ರೆಸ್ಟೋರೆಂಟ್ಗಳು ಕಾರ್ಯನಿರ್ವಹಿಸುತ್ತಿವೆ.
60ರ ಹರೆಯದಲ್ಲೂ ಪ್ರೊ. ಮಹಾದೇವನ್ ಅವರು ಹತ್ತಾರು ರೆಸ್ಟೋರೆಂಟ್ ಮತ್ತು ಬೇಕರಿಯನ್ನು ಚಾಕಚಕ್ಯತೆಯಿಂದ ಮುನ್ನಡೆಸುತ್ತಿದ್ದಾರೆ. ಅವರ ಕೀರ್ತಿ ಆಗಸದೆತ್ತರಕ್ಕೆ ಚಾಚಿದೆ ಅಂದ್ರೂ ತಪ್ಪಾಗಲಾರದು. ಭಾರತದ ಪ್ರಮುಖ ಉದ್ಯಮಿಗಳಲ್ಲಿ ಪ್ರೊ. ಎಂ. ಮಹಾದೇವನ್ ಕೂಡ ಸ್ಥಾನ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾರೆ.