ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಗಿರೋ ಆಟಗಾರ. ಅವರು ಫಿಟ್ನೆಸ್ಗೆ ಇಡೀ ವಿಶ್ವ ಕ್ರಿಕೆಟ್ ಫಿದಾ ಆಗಿದೆ. ಕೊಹ್ಲಿ ಫಿಟ್ಟೆಸ್ಟ್ ಕ್ರಿಕೆಟರ್ ಆಗಿದ್ದು, ತಂಡದ ಇತರ ಸದಸ್ಯರೂ ಕೂಡ ಫಿಟ್ನೆಸ್ ಮಂತ್ರ ಜಪಿಸುವಂತೆ ಮಾಡಿದವರು ಅನ್ನೋದ್ರಲ್ಲಿ ನೋ ಡೌಟ್.
ಆದ್ರೆ ಭಾರತ ಕ್ರಿಕೆಟ್ನಲ್ಲಿ ಫಿಟ್ನೆಸ್ ವಿಚಾರದದಲ್ಲಿ ವಿರಾಟ್ ಕೊಹ್ಲಿಯನ್ನೇ ಮೀರಿಸಿದ ಮೂವರು ಕ್ರಿಕೆಟಿಗರಿದ್ದಾರೆ. ಆ ಮೂವರಲ್ಲಿ ಇಬ್ಬರು ಕನ್ನಡಿಗರು ಅನ್ನೋದು ವಿಶೇಷ.
ಕನ್ನಡದ ಹಾಲಿ ಕ್ರಿಕೆಟಿಗರು ಅಂದ್ರೆ ಸದ್ಯ ಥಟ್ ಅಂತ ನೆನಪಿಗೆ ಬರುವ ಹೆಸರು ಕರಾವಳಿ ಕುವರ ಕೆ ಎಲ್ ರಾಹುಲ್ ಅವರದ್ದು. ಆದರೆ, ಫಿಟ್ನೆಸ್ ವಿಚಾರದಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನು ಮೀರಿಸಿದ ಆಟಗಾರ ರಾಹುಲ್ ಅಲ್ಲ!
ಮನೀಷ್ ಪಾಂಡೆ ಮತ್ತು ಕರುಣ್ ನಾಯರ್!
ಹೌದು ಕನ್ನಡಿಗರಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಫಿಟ್ನೆಸ್ ವಿಷಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇದನ್ನು ನಂಬಲು ಕೆಲವು ಅಭಿಮಾನಿಗಳಿಗೆ ಕಷ್ಟ ಎನಿಸಿದರೂ ನಂಬಲೇ ಬೇಕು. ಇದು ಅಧಿಕೃತವಾಗಿ ಹೊರಬಂದಿರುವ ವಿಷಯ.
ಯೋ ಯೋ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಗಿಂತ ಮೂವರು ಆಟಗಾರರು ಹೆಚ್ಚು ಸ್ಕೋರ್ ಮಾಡಿದ್ದಾರೆ. ಕರ್ನಾಟಕದ ಬ್ಯಾಟ್ಸ್ಮನ್ಗಳಾದ ಮನೀಷ್ ಪಾಂಡೆ, ಕರುಣ್ ನಾಯರ್ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ಮಯಾಂಕ್ ಡಾಗರ್ ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಸ್ಕೋರ್ ಮಾಡಿ ಮುಂಚೂಣಿಯಲ್ಲಿರುವ ಕ್ರಿಕೆಟಿಗರಾಗಿದ್ದಾರೆ.
ಭಾರತ ಹಾಕಿ ತಂಡದ ಆಟಗಾರ ಸರ್ದಾರ್ ಸಿಂಗ್ ಯೋ ಯೋ ಟೆಸ್ಟಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ್ದು, ಅವರ ಸ್ಕೋರ್ ಅನ್ನು ಇದುವರೆಗೆ ಯಾರೂ ಕೂಡ ಬ್ರೇಕ್ ಮಾಡಲಾಗಿಲ್ಲ.