ಫೀಲ್ಡಿಂಗ್ ನಲ್ಲಿ ಜಡೇಜಾ ವಿಶೇಷ ದಾಖಲೆ!

Date:

ಮುಂಬೈ: ಕ್ರಿಕೆಟ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಮತ್ತು ಬೌಲರ್‍ ಗಳೆಷ್ಟು ಮುಖ್ಯವೂ ಅಷ್ಟೇ ಮುಖ್ಯ ಒಬ್ಬ ಉತ್ತಮ ಫೀಲ್ಡರ್. ಭಾರತ ತಂಡದ ಅದ್ಭುತ ಫೀಲ್ಡರ್‍ ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ ಫೀಲ್ಡಿಂಗ್‍ನಲ್ಲಿ ಇದೀಗ ನಡೆಯುತ್ತಿರುವ ಐಪಿಎಲ್‍ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜಡ್ಡು, ತನ್ನ ಫೀಲ್ಡಿಂಗ್ ಕರಾಮತ್ತನ್ನು ಮತ್ತೊಮ್ಮೆ ತೋರಿಸಿದ್ದಾರೆ. ಜಡ್ಡು ಒಬ್ಬ ಆಲ್‍ರೌಂಡರ್ ಆಟಗಾರ ಎಂಬುದನ್ನು ಪದೇ ಪದೇ ಮೈದಾನದಲ್ಲಿ ಪ್ರೂವ್ ಮಾಡುತ್ತಿದ್ದು, ಇದೀಗ ತನ್ನ ಬುಲೆಟ್ ತ್ರೋ ಮೂಲಕ ರನೌಟ್ ಮಾಡಿ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

ಚೆನ್ನೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡದ ಆಟಗಾರ ಕ್ರಿಸ್ ಗೇಲ್ ಸ್ಟ್ರೈಕ್ ನಲ್ಲಿ ಚುರುಕಿನ ರನ್ ಓಡಲು ತಂಡದ ನಾಯಕ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಕರೆ ನೀಡಿದರು. ಅದರಂತೆ ರನ್ ಕದಿಯಲು ಮುಂದಾದ ರಾಹುಲ್ ಇನ್ನೇನು ಕ್ರಿಸ್ ಮುಟ್ಟಬೇಕೆನ್ನುವಷ್ಟರಲ್ಲಿ ಪಾಯಿಂಟ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಜಡೇಜಾ ನುಗ್ಗಿ ಬಂದು ಡೈರೆಕ್ಟ್ ಹಿಟ್ ಹೊಡೆದರು. ನಂತರ ಮೂರನೇ ಅಂಪೈರ್ ಇದನ್ನು ಸರಿಯಾಗಿ ಪರೀಕ್ಷಿಸಿ ರನೌಟ್ ಎಂದು ತೀರ್ಪು ನೀಡಿದರು. ಈ ಮೂಲಕ ಜಡೇಜಾ ಐಪಿಎಲ್‍ನಲ್ಲಿ 22 ರನೌಟ್ ಮಾಡುವುದರೊಂದಿಗೆ ನೂತನ ದಾಖಲೆ ನಿರ್ಮಿಸಿದರು.

ಈವರೆಗಿನ ಆವೃತ್ತಿಗಳನ್ನು ಗಮನಿಸಿದರೆ ಐಪಿಎಲ್‍ನಲ್ಲಿ ಅದೇಷ್ಟೋ ರನೌಟ್‍ಗಳು ಕಣ್ಣಮುಂದೆ ಬರುತ್ತದೆ. ಅದರಲ್ಲಿ ಇದೀಗ ಜಡೇಜಾ ಅವರ ರನೌಟ್ ಕೂಡ ಸೇರಿಕೊಂಡಿದೆ. ಐಪಿಎಲ್‍ನಲ್ಲಿ ಈ ವರೆಗೆ ಅತೀ ಹೆಚ್ಚು ರನೌಟ್ ಮಾಡಿದ ದಾಖಲೆ ಚೆನ್ನೈ ತಂಡದ ನಾಯಕ ಧೋನಿ ಅವರ ಹೆಸರಲ್ಲಿತ್ತು. ಧೋನಿ ಈವರೆಗೆ ಐಪಿಎಲ್‍ನಲ್ಲಿ 21 ರನೌಟ್ ಮಾಡಿದ್ದರು. ಇದೀಗ ಜಡೇಜಾ 22 ರನೌಟ್ ಮಾಡುವ ಮೂಲಕ ತನ್ನ ತಂಡದ ನಾಯಕನ ರನೌಟ್ ದಾಖಲೆಯನ್ನು ಮುರಿದು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...