ಬರದ ನಾಡಿಗೆ ನೀರರಿಸಿದ ದೇವತೆ ಅಮಲಾ!

Date:

ಇವರೇ ಬೆಂಗಾಡಿಗೆ ಭಾಗೀರತಿಯಾದ 70ರ ಹರೆಯದ ಅಮಲಾ ರೂಯಿಯಾ.ಮಹಾರಾಷ್ಟ್ರದವರು. ಆದ್ರೆ ತಮ್ಮ ಉದಾತ್ತ ಕಾರ್ಯದ ಮೂಲಕ ಬರಪೀಡಿತ ರಾಜಸ್ತಾನದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಸಾಂಪ್ರದಾಯಿಕ ಮಳೆ ನೀರು ಕೊಯ್ಲು ತಂತ್ರವನ್ನು ಬಳಸಿಕೊಂಡು 200 ನೀರಿನ ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ.

ರೂಮಿಯಾ ನಿರ್ಮಿಸಿರುವ ಕೊಳಗಳಲ್ಲಿ ಒಂದು ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗುತ್ತಿದೆ. ಕೇವಲ ರಾಜಸ್ತಾನ ಮಾತ್ರವಲ್ಲ ನೀರಿಲ್ಲದೆ ಬವಣೆ ಅನುಭವಿಸುತ್ತಿದ್ದ ಹಲವು ರಾಜ್ಯಗಳಲ್ಲಿ ಅಮಲಾ ಇಂತಹ ಚೆಕ್ ಡ್ಯಾಮ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಪ್ರದೇಶಗಳಲ್ಲೆಲ್ಲ ಈಗ ವರ್ಷಪೂರ್ತಿ ಬಾವಿಗಳು ನೀರಿನಿಂದ ತುಂಬಿರುತ್ತವೆ, ಹಸಿರು ನಳನಳಿಸುತ್ತಿದೆ.


ಅಮಲಾ ರೂಯಿಯಾ ಅವರಿಗೆ ಆಧ್ಯಾತ್ಮದಲ್ಲಿ ಆಸಕ್ತಿಯಿತ್ತು. 90ರ ದಶಕದಲ್ಲಿ ರಾಜಸ್ತಾನದಲ್ಲಿ ಭೀಕರ ಬರ ತಾಂಡವವಾಡುತ್ತಿತ್ತು, ಮನಕಲಕುವ ಆ ದೃಶ್ಯಗಳನ್ನೆಲ್ಲ ಟಿವಿಯಲ್ಲಿ ಪ್ರಸಾರವಾಗುತ್ತಿದ್ದವು. ಆ ಚಿತ್ರಗಳನ್ನು ನೋಡಿದ ಅಮಲಾ ರೂಯಿಯಾ ಅವರನ್ನು ಕಂಗೆಡಿಸಿತ್ತು. ಆ ರೈತರಿಗಾಗಿ ಏನನ್ನಾದ್ರೂ ಮಾಡಬೇಕೆಂದು ಅಂದೇ ನಿರ್ಧರಿಸಿದರು.
ಆ ಸಂದರ್ಭದಲ್ಲಿ ಅಮಲಾ ಅವರ ಮಾವ ಬರಪೀಡಿತ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ್ರು. ಆಹಾರವನ್ನೂ ಪೂರೈಕೆ ಮಾಡಿದ್ರು. ಆದ್ರೆ ಅದ್ರಿಂದ ಅಮಲಾ ಅವರ ಮನಸ್ಸಿಗೆ ಸಮಾಧಾನವಾಗಲಿಲ್ಲ. ಹದಗೆಟ್ಟ ಸ್ಥಿತಿಯಲ್ಲೂ ಜನರು ಆರಾಮಾಗಿ ಬದುಕಲು ಸಾಧ್ಯವಾಗುವಂತೆ ಏನನ್ನಾದ್ರೂ ಮಾಡಬೇಕೆಂದು ನಿರ್ಧರಿಸಿದ್ರು.


ಸಾಂಪ್ರದಾಯಿಕ ಮಳೆ ಕೊಯ್ಲಿನ ಮೂಲಕ ಅಲ್ಲಿ ನೀರಿನ ಕೊಳ ನಿರ್ಮಾಣ ಮಾಡಲು ತೀರ್ಮಾನಿಸಿದ್ರು. 2000ನೇ ಇಸ್ವಿಯಲ್ಲಿ ಈ ಕಾರ್ಯ ಆರಂಭಿಸಿದ ರೂಯಿಯಾ ಶೇಖಾವತಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 200 ನೀರಿನ ಕೊಳಗಳನ್ನು ನಿರ್ಮಾಣ ಮಾಡಿದರು. ಮಹಿಳೆಯರು ನೀರಿಗಾಗಿ ಕಿಲೋ ಮೀಟರ್​ ಗಟ್ಟಲೆ ಹೋಗಬೇಕಾದ ಪರಿಸ್ಥಿತಿ ಇತ್ತು. ಅದನ್ನು ರೂಯಿಯಾ ತಪ್ಪಿಸಿದರು.
ಇದೇ ರೀತಿ ರಾಜಸ್ತಾನ ರೈತರ ಆತ್ಮಹತ್ಯೆ ಬಗ್ಗೆ ತಿಳಿದ ಅಮಲಾ ಅವರಿಗಾಗಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲು ತೀರ್ಮಾನಿಸಿದ್ರು. ಇದಕ್ಕಾಗಿ ಅವರು ರಾಜಸ್ಥಾನದ ಬೇವಿನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡ್ರು, ಅಂದುಕೊಂಡಂತೆ ರೈತರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚೆಕ್ ಡ್ಯಾಮ್ ನಿರ್ಮಿಸಿದ್ರು. ರೈತರ ಜಮೀನುಗಳಿಗೆ ನೀರುಣಿಸಿದ್ರು. ರೈತಾಪಿ ಕುಟುಂಬದ ಮೊಗದಲ್ಲಿ ಮಂದಹಾಸ ಮೂಡಿಸಿದ್ರು ಇದೆಲ್ಲವೂ ರೂಯಿಯಾ ಅವರ ಸಾಮಾಜಿಕ ಕಾರ್ಯದ ಪ್ರತಿಫಲ.


ರಾಜಸ್ಥಾನ ಮಾತ್ರವಲ್ಲ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಹರಿಯಾಣದಲ್ಲೂ 216ಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ಅಮಲಾ ನಿರ್ಮಾಣ ಮಾಡಿದ್ದಾರೆ. ಈ ಚೆಕ್ ಡ್ಯಾಮ್ಗಳಿಂದ ಸಾವಿರಾರು ಹಳ್ಳಿಗಳ ಲಕ್ಷಾಂತರ ರೈತರಿಗೆ ಪ್ರಯೋಜನವಾಗುತ್ತಿದೆ.
ಅಮಲಾ ರೂಯಿಯಾ ಅವರು ಆಕಾರ್ ಚಾರಿಟೇಬಲ್ ಟ್ರಸ್ಟ್ ಅನ್ನು ಕೂಡ ಸ್ಥಾಪಿಸಿದ್ದಾರೆ. ಆ ಮೂಲಕ ರೈತರಿಗೆ ನೆರವಾಗಿದ್ದಾರೆ. ಆದ್ರೆ ಸರ್ಕಾರದಿಂದ ಇದುವರೆಗೂ ಅಮಲಾ ಅವರಿಗೆ ಯಾವುದೇ ನೆರವು ದೊರೆತಿಲ್ಲ. ನೀರಿನ ಕೊಳ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ತಮ್ಮ ಸ್ವಂತ ಹಣ, ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ಪಡೆದ ಹಣವನ್ನು ಬಳಸಿಕೊಂಡಿದ್ದಾರೆ. 200ಕ್ಕೂ ಹೆಚ್ಚು ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿ, ಸಹಸ್ರಾರು ರೈತರ ಬದುಕಿಗೆ ಆಸರೆಯಾಗಿದ್ದಾರೆ.
ದೇಶದ ಎಲ್ಲ ಕಡೆಗಳಲ್ಲೂ ಇಂತಹ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ಅನ್ನದಾತರ ಸಮಸ್ಯೆಗೆ ಇತಿಶ್ರೀ ಹಾಡಬೇಕು ಅನ್ನೋದು ಅಮಲಾ ಅವರ ಒತ್ತಾಯ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....