ಬರ್ತ್​ಡೇ ಕೇಕ್ ಮುಖಕ್ಕೆ ಬಳಿದ್ರೆ ಅರೆಸ್ಟ್ ಆಗ್ತೀರ ಹುಷಾರಾಗಿರಿ..!

Date:

ಬರ್ತ್​ಡೇ ಸೆಲೆಬ್ರೇಷನ್ ಎಂದರೆ ಕೇಕ್ ಕತ್ತರಿಸುವುದು, ಮುಖಕ್ಕೆ ಮೆತ್ತುವುದು, ಫೋಮ್​ ಎಸೆಯುವುದು ಎಲ್ಲವೂ ಸರ್ವೇ ಸಾಮಾನ್ಯ..! ಆದರೆ ಇನ್ನುಮುಂದೆ ಮುಖಕ್ಕೆ ಕೇಕ್ ಹಚ್ಚಿದರೆ ನೀವು ಅರೆಸ್ಟ್ ಆಗಲಿದ್ದೀರಿ..!
ಇದು ದೂರದ ಯಾವುದೋ ದೇಶದಲ್ಲಿ ಜಾರಿಗೆ ಬಂದಿರುವ ವಿಚಿತ್ರ ಆದೇಶವಲ್ಲ. ಪಕ್ಕದ ಗುಜರಾತ್​ನಲ್ಲಿ ಜಾರಿಗೊಂಡಿರುವ ಆದೇಶ. ಗುಜರಾತ್​ನಲ್ಲಿ ಪಬ್ಲಿಕ್ ಪ್ಲೇಸ್​ನಲ್ಲಿ ಸ್ನೇಹಿತರ ಮುಖಕ್ಕೆ ಕೇಕ್ ಬಳಿಯುವಂತಿಲ್ಲ. ಹುಟ್ಟುಹಬ್ಬದ ಆಚರಣೆ ಎಂದು ಕಾರಣ ನೀಡಿ ಕೇಕ್ ಬಳಿದರೆ ನೀವು ಅರೆಸ್ಟ್ ಆಗಲಿದ್ದೀರಿ.
ಸೂರತ್ ಪೊಲೀಸರು ಹೀಗೆ ಒಂದು ಆದೇಶವನ್ನು ಹೊರಡಿಸಿ ಬಿಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬಲವಂತವಾಗಿ ಮುಖಕ್ಕೆ ಕೇಕ್ ಹಚ್ಚುವುದು, ಫೋಮ್ ಅಥವಾ ಯಾವುದೇ ಕೆಮಿಕಲ್ ಎಸೆಯುವದನ್ನು ನಿಷೇಧಿಸಲಾಗಿದ್ದು, ಹಾಗೆ ಮಾಡಿದರೆ ಬಂಧನ ಆಗಲಿದೆ. ಸಿಆರ್​ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಆಗುವುದನ್ನು ತಪ್ಪಿಸಲು ಇದನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಏಕಾಏಕಿ ಆದೇಶ ಹೊರಡಿಸಿಲ್ಲ. ಅನೇಕ ದೂರುಗಳು ಬಂದಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಗುಜರಾತ್ನಲ್ಲಿ ಇತ್ತೀಚೆಗೆ ಪಬ್​ಜಿಗೆ ಬ್ರೇಕ್ ಹಾಕಿದ್ದರು. ಈಗ ಬರ್ತ್ಡ್​ಡೇಯ ಜೋರಿ ಸೆಲಬ್ರೇಷನ್ ಗೂ ಬ್ರೇಕ್ ಹಾಕಿದ್ದಾರೆ..! ಯಾವುದಕ್ಕೂ ಗುಜರಾತ್​ನಲ್ಲಿ ಪಬ್ಲಿಕ್ ಪ್ಲೇಸ್​ನಲ್ಲಿ ಹುಟ್ಟುಹಬ್ಬ ಆಚರಿಸಿ ಕಂಬಿ ಎಣಿಸೋ ದುಸ್ಸಾಹಸಕ್ಕೆ ಮಾತ್ರ ಕೈ ಹಾಕ್ಬೇಡಿ.

Share post:

Subscribe

spot_imgspot_img

Popular

More like this
Related

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್...

ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನ

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ...