ಬಲೆಗೆ ಬಿತ್ತು ಬರೋಬ್ಬರಿ 19 ಕೆಜಿ ತೂಕದ ಮೀನು

Date:

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ವೇಳೆ ಸೋಮವಾರ ಬರೋಬ್ಬರಿ 19 ಕೆ.ಜಿ ತೂಕದ ಕುರುಡೆ ಮೀನು ಏಂಡಿ ಬಲೆಗೆ ಬಿದ್ದಿದೆ.

ಕಾರವಾರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೂ ಸಹ ನಿಷೇಧ ಹೇರಿದ್ದರಿಂದಾಗಿ ಯಾವುದೇ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ.

ಆದರೆ ಸೋಮವಾರ ಮಳೆ ಕೊಂಚ ವಿರಾಮ ನೀಡಿದ ವೇಳೆಯಲ್ಲಿ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದರು. ದಡದಲ್ಲಿಯೇ ನಿಂತು ಬೀಸುವ ಏಂಡಿ ಬಲೆ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬಲೆಗೆ ಭಾರೀ ಗಾತ್ರದ ಕುರುಡೆ ಮೀನು ಸಿಲುಕಿದೆ.

ಬಲೆಗೆ ಸಿಲುಕಿದ ಮೀನು ಬರೋಬ್ಬರಿ 18 ಕೆ.ಜಿ 710 ಗ್ರಾಂ ತೂಕವಿದ್ದು, ಬಲೆ ಬೀಸಿದ ಮೀನುಗಾರರು ಫುಲ್ ಖುಷ್ ಆಗಿದ್ದಾರೆ. ಈ ಮೀನು ಹಿಡಿಯುತ್ತಿದ್ದಂತೆ ಅದನ್ನು ಗಮನಿಸಿದವರು ಕೆ.ಜಿಗೆ 600 ರೂಪಾಯಿ ಮೊತ್ತದಲ್ಲಿ ಒಟ್ಟೂ 8 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

ಸಾಮಾನ್ಯವಾಗಿ ಕುರುಡೆ ಮೀನು 20 ರಿಂದ 25 ಕೆ.ಜಿ ವರೆಗೂ ಬೆಳವಣಿಗೆ ಹೊಂದುತ್ತದೆ. ಆದರೆ ದಡದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೀನು ಬಲೆಗೆ ಬೀಳುವುದು ಅಪರೂಪವಾಗಿದೆ

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...