ಬಾಗಲಕೋಟೆ: ಪ್ರೇಮಿಗಳ ದುರಂತ ಅಂತ್ಯ: ವೈಮನಸ್ಸಿಗೆ ಇಬ್ಬರ ಜೀವ ಬಲಿ

tnit editors
1 Min Read

ಬಾಗಲಕೋಟೆ: ಪ್ರೇಮಿಗಳ ದುರಂತ ಅಂತ್ಯ: ವೈಮನಸ್ಸಿಗೆ ಇಬ್ಬರ ಜೀವ ಬಲಿ

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ವೈಮನಸ್ಸಿನ ಹಿನ್ನೆಲೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಬನಹಟ್ಟಿಯ KHDC ಕಾಲೋನಿಯಲ್ಲಿ ಪವಿತ್ರಾ (19) ಎಂಬ ಯುವತಿ ನೇಣಿಗೆ ಶರಣಾಗಿದ್ದರೆ, ಈ ವಿಷಯ ತಿಳಿದುಕೊಂಡ ಪ್ರಿಯತಮ ಕಾರ್ತಿಕ್ ನಾಯಕ್ (19) ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಇಬ್ಬರ ಮಧ್ಯೆ ಜಗಳ ಉಂಟಾಗಿದ್ದು, ಇದರಿಂದ ಮನನೊಂದ ಪವಿತ್ರಾ ಮೊದಲು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ಈ ವಿಷಯ ತಿಳಿದ ಕಾರ್ತಿಕ್ ಕೂಡಾ ಪ್ರಾಣ ಕಳೆದುಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಬನಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article