ಕಾಲುಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಇಂದು ಬಾಲಕಿ ಸಾವುನ ವಿಚಾರವಾಗಿ ಘಟನೆಗೆ ಜೇವರ್ಗಿ ತಾಲೂಕಿನ ಜನರ ಆಕ್ರೋಶ
ಬಾಲಕಿಯ ಶವ ಇಟ್ಟು ಪ್ರತಿಭಟನೆ ನೆಡಿಸಿದ್ದಾರೆ,
ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನೆಡೆಸಿದ ಜನರು
ಎಸ್.ಪಿ. ಕಛೇರಿಗೆ ಶವ ಒಯ್ಯಲು ಯತ್ನಿಸಿದಾಗ ಪೊಲೀಸರ ಅಡ್ಡಿಪಡಿಸಲಾಯಿತು ಪೊಲೀಸ್ ಭವನಕ್ಕೆ ತೆರಳದಂತೆ ಬ್ಯಾರಿಕೇಡ್ ಹಾಕಿದ ಪೊಲೀಸರು ಹೀಗಾಗಿ ಜನರು ಜಿಮ್ಸ್ ಆಸ್ಪತ್ರೆ ಎದುರೇ ರಸ್ತೆ ಮೇಲೆ ಶವ ಇಟ್ಟು ಪ್ರತಿಭಟನೆ ನೆಡೆಸಿದರು ಜೇವರ್ಗಿ ಇನ್ಸಪೆಕ್ಟರ್ ವಿರುದ್ಧ ತೀವ್ರ ಆಕ್ರೋಶ ವೇಕ್ತವಾಯಿತು,ರಾಜಕೀಯ ಕುಮ್ಮಕ್ಕಿನಿಂದ ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿದ್ದಾರೆ ಈ ವೇಳೆ ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೂ ಪೆಟ್ಟಾಗಿದೆ. ಪೊಲೀಸರು ಹೊಡೆದ ಪೆಟ್ಟಿನಿಂದಾಗಿಯೇ ಜೈಲಿಗೆ ಹೋದ ನಂತರ ಮಗು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.
ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ನೆಡೆಸಿದರು ಬಾಲಕಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ ಮಾಡಲಾಯಿತು.
ಹಲ್ಲೆ ಮಾಡಿದವರೇ ಮೊದಲು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಆಧರಿಸಿ ಸಂತೋಶ್ ಸೇರಿ ಆತನ ಕುಟುಂಬದ ಏಳು ಜನರನ್ನು ಬಂಧಿಸಿ, ಮಕ್ಕಳನ್ನೂ ವಶಕ್ಕೆ ಪಡೆದಿದ್ದ ಪೊಲೀಸರು ಬಂಧಿತರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಟ್ಟ ನಂತರ ಭಾರತಿ ಎಂಬ ಮೂರು ವರ್ಷದ ಬಾಲಕಿ ಸಾವಿಗಿದಾಗಿದ್ದು
ಸಾವಿನ ನ್ಯಾಯಾಂಗ ತನಿಖೆಗೆ ಜೇವರ್ಗಿ ಜನರು ಪಟ್ಟು ಹಿಡಿದ್ದಿದ್ದಾರೆ.