ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ ..!

Date:

ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ ..!

2014ರ ಯೂನಿಸೆಫ್ ವರದಿ ಪ್ರಕಾರ, ಭಾರತದಲ್ಲಿ 18 ವರ್ಷ ತುಂಬುವ ಮೊದಲೇ ವಿವಾಹ ಆಗುವ ಬಾಲಕಿಯರ ಸಂಖ್ಯೆ ಶೇಕಡ 47. ! ಹಾಗಾಗಿ, ಬಾಲ್ಯ ಈ ಮಕ್ಕಳಿಗೆ ವರವಾಗುವ ಬದಲು ಶಾಪವಾಗಿ ಕಾಡುತ್ತಿದೆ. ಇದರ ವಿರುದ್ಧ ರಾಜಸ್ಥಾನದ ಮನೋವೈದ್ಯೆ ಡಾ. ಕೀರ್ತಿ ಭಾರ್ತಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಸಲ್ಲೇ ಹೆಣ್ಣು ಮಕ್ಕಳು ಮದುವೆ ಆಗುವುದರಿಂದ ಅವರ ಶಿಕ್ಷಣ, ಕಲಿಕೆ ಎಲ್ಲವೂ ಮೊಟಕುಗೊಳ್ಳುತ್ತದೆ. ಮತ್ತೆ ಆ ಮುಗ್ಧ ಹೆಣ್ಣುಮಕ್ಕಳ ದುಸ್ಥಿತಿಗೆ ಕಾರಣವಾಗಿದೆ ಎಂದು ದೇಶದೆಲ್ಲೆಡೆ ಜಾಗೃತಿ ಮೂಡಿಸುವ ಕೆಲಸವನ್ನು ಡಾ. ಕೀರ್ತಿಭಾರ್ತಿಯವರು ಮಾಡಿಕೊಂಡು ಬರುತ್ತಿದ್ದಾರೆ.
ಈಗ್ಗೆ ಐದು ವರ್ಷಗಳ ಹಿಂದೆ ಅಂದರೆ, 2012ರಲ್ಲಿ ಓರ್ವ ಬಾಲಕಿಯ ವಿವಾಹ ತಡೆದು, ಆಕೆಯ ಓದಿನ ಕನಸಿಗೆ ನೆರವಾದವರು ರಾಜಸ್ಥಾನದ ಜೈಪುರದ ಈ ಕೀರ್ತಿ ಭಾರ್ತಿ ಯವರು. ಈ ಪ್ರಸಂಗ ಅವರನ್ನು ಬಹುವಾಗಿ ಪ್ರಭಾವಿಸಿ ಬಾಲ್ಯ ವಿವಾಹ ವಿರುದ್ಧ ಹೋರಾಟಕ್ಕೆ ಇಳಿಸಿತು.
ಡಾ. ಕೀರ್ತಿ ಭಾರ್ತಿಬಾಲ್ಯವಿವಾಹ ಮಕ್ಕಳ ಕನಸುಗಳನ್ನೆಲ್ಲ ಕಮರಿಸಿಬಿಡುತ್ತದೆಂಬುದು ಮನದಟ್ಟಾಗುತ್ತಲೇ ಮಕ್ಕಳ ಬಾಲ್ಯ ರಕ್ಷಿಸುವುದೇ ಜೀವನಮಂತ್ರವಾಯಿತು. ವೃತ್ತಿಯಲ್ಲಿ ಆಪ್ತ ಸಮಾಲೋಚಕಿಯಾಗಿರುವ ಕೀರ್ತಿ 2012ರಲ್ಲಿ ‘ಸಾರಥಿ’ ಎಂಬ ಟ್ರಸ್ಟ್ ಆರಂಭಿಸಿ, ಬಾಲ್ಯವಿವಾಹದ ವಿರುದ್ಧ ಹೋರಾಟ ಆರಂಭಿಸಿದರು.


ಡಾ. ಕೀರ್ತಿ ಭಾರ್ತಿಯವರು, ಬಾಲ್ಯವಿವಾಹದಿಂದ ರಕ್ಷಿಸಿದ ಬಾಲಕಿಯರ ಪೋಷಣೆ ಹೇಗೆ ಎಂಬ ಪ್ರಶ್ನೆ ಉದ್ಭವವಾದಾಗ ಅದಕ್ಕೆ ಉತ್ತರವಾಗಿ ಆಶ್ರಯ ಮನೆಗಳನ್ನು ತೆರೆದರು. ಉಚಿತ  ಶಿಕ್ಷಣ, ವಸತಿ ಜತೆಗೆ ಬದುಕನ್ನು ಸ್ವಾವಲಂಬಿಯಾಗಿಸಲು ಉದ್ಯೋಗ ತರಬೇತಿಯನ್ನೂ ‘ಸಾರಥಿ’ ಯಲ್ಲಿ ನೀಡಲಾಗುತ್ತಿದೆ.
ಇನ್ನು ಈವರೆಗೆ 900 ಕ್ಕಿಂತಲೂ ಹೆಚ್ಚು ಬಾಲಕಿಯರನ್ನು ರಕ್ಷಿಸಿರುವ ಡಾ . ಕೀರ್ತಿ ಅವರಿಗೆಲ್ಲ ಆಶ್ರಯ ನೀಡುವುದರ ಜತೆಗೆ ಹೊಸ ಬದುಕು ಕಲ್ಪಿಸಿದ್ದಾರೆ. ಆದರೆ, ಪ್ರತಿ ಬಾರಿ ಇಂಥ ಮದುವೆ ತಡೆದಾಗಲೂ ಬಾಲಕಿಯರ ಪಾಲಕರಿಂದ. , ರೌಡಿಗಳಿಂದ, ರಾಜಕಾರಣಿಗಳಿಂದಲೂ ಜೀವ ಬೆದರಿಕೆ ಬಂದಿದ್ದುಂಟು. ಆದರೆ, ಕೀರ್ತಿ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ .
ಡಾ. ಕೀರ್ತಿ ಭಾರ್ತಿಯವರು ಜೀವ ಹೋದರೂ ಸರಿಯೇ, ಬಾಲಕಿಯರ ಬದುಕು ಹಾಳಾಗಲು ಬಿಡುವುದಿಲ್ಲ ಎಂದು ನಿಶ್ಚಯಿಸಿ ಹೋರಾಟಕ್ಕಿಳಿದಿದ್ದಾರೆ.

 

ಇಂತಹ ಮಕ್ಕಳ ಮಧ್ಯೆಯೇ ಇದ್ದು ಕೆಲಸ ಮಾಡುತ್ತ ಬಾಲಕಿಯರ ಮೊಗದಲ್ಲಿ ನಗು ಮೂಡಿಸುತ್ತಿದ್ದಾರೆ.
ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುತ್ತಿರುವ ಇವರೀಗ ದೇಶದೆಲ್ಲೆಡೆ ಜನರಿಗೆ ಗೊತ್ತು. ಸರ್ಕಾರ, ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಶಭಾಷ್ ಗಿರಿ ಕೂಡ ಕೊಟ್ಟಿವೆ. ಈ ದಿಟ್ಟೆಯ ಹೋರಾಟ ಇತರೆ ಯುವತಿಯರಿಗೆ ಮಾದರಿ ಅಲ್ಲವೇ..

ನನ್ನನ್ನು ಕೆರಳಿಸಿದ್ರೆ ಹುಷಾರ್ ಅಂದ ಬಿಗ್ ಬಾಸ್ ಪ್ರಥಮ್..! ಕೆ.ಜಿ‌ ಹಳ್ಳಿ ಗಲಭೆ ವಿಚಾರವಾಗಿ ‘ಒಳ್ಳೇ ಹುಡ್ಗ’ ಹಾಕಿದ ಪೋಸ್ಟ್ ಏನ್ ಗೊತ್ತಾ?

ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!

ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು..

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...