ಬಿಗ್‌ಬಾಸ್-13 ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ!

Date:

ಬಿಗ್‌ಬಾಸ್-13 ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ!

 

ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಮೋಸ್ಟ್ ಕಾಮನ್ ರೀತಿ ಆಗಿದೆ. ವಯಸ್ಸು 20 ದಾಟ್ಟಿರಲ್ಲ ಅದಾಗಲೇ ಹಾರ್ಟ್ ನೊಳಗೆ ಸ್ಟಂಟ್ ಕೂತ್ತಿರುತ್ತೆ. ಇದೀಗ ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೆಫಾಲಿ ‘ಕಾಂಟಾ ಲಗಾ’ ಮೂಲಕ ಹೆಸರುವಾಸಿಯಾಗಿದ್ದರು ಮತ್ತು ಚಲನಚಿತ್ರಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಲೆ ಇದ್ದರು. ‘ಕಾಂಟಾ ಲಗಾ’ ಎಂಬ ಐಕಾನಿಕ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮತ್ತು ಬಿಗ್ ಬಾಸ್ 13 ರಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ತಮ್ಮ 42 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕಾಂತಾ ಲಗಾ ಹಾಡಿನ ಮೂಲಕ ನಟಿ ಫೇಮಸ್ ಆಗಿದ್ದರು.

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...