ಬಿಗ್ ಬಾಸ್ ಗೆ ಹೋಗಬೇಕು ಎಂದು ಕಿಚ್ಚನ ಮನೆ ಎದುರು ವ್ಯಕ್ತಿಯ ಹೈಡ್ರಾಮ

Date:

ಬೆಂಗಳೂರು: ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬನ ಅತಿರೇಕದ ವರ್ತನೆ ಕಂಡು ಸೆಕ್ಯೂರಿಟಿ ಗಾರ್ಡ್ ಗಳು ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ರಾತ್ರೋ ರಾತ್ರಿ ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬ ಹೈ ಡ್ರಾಮ ಮಾಡಿದ್ದಾನೆ.
ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿ ಮೂಲಕ ಬಂದಿರೋ ಮಂಜು ಅನ್ನೋ ವ್ಯಕ್ತಿ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದಾನೆ. ಟಿ ನರಸಿಪುರದಿಂದ ಬಂದಿದಿನಿ ಅಂತ ಹೇಳಿದ್ದ ಮಂಜು, ನಾವು ಅನಕ್ಷರಸ್ತರು ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ.
ಮಂಜು ಹೇಳುವ ಪ್ರಕಾರ ಮನೆಯೊಳಗಿದ್ದ ವ್ಯಕ್ತಿಯೊಬ್ಬ ಮಂಜುಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ರಂತೆ. ಧಮಾಕಿ ಸಹ ಹಾಕಿದ್ದಾರೆ ಅಂತ ಆರೋಪಿಸಿದ್ದಾನೆ. ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್ ಬಂದು ಜೆಪಿ ನಗರದ ಸುದೀಪ್ ಮನೆ ಮುಂದೆ ಗಾಡಿ ನಿಲ್ಲಿಸಿದ್ದ ಮಂಜುಗೆ ಬುದ್ದಿ ಹೇಳಿ ಕಳಿಸಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು?!

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು ಎಂಬ ನಂಬಿಕೆ ಅನೇಕ...

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್...

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ...