ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ವಾಸುದೇವನ್ ಅವರು ಎಲಿಮಿನೇಟ್ ಆಗಿ ಹೊರಬಂದರು. ಇನ್ನು ಹೊರ ಬಂದ ಚೈತ್ರಾ ವಾಸುದೇವನ್ ಅವರನ್ನು ವೇದಿಕೆಗೆ ಬರಮಾಡಿಕೊಂಡ ಕಿಚ್ಚ ಸುದೀಪ್ ಅವರು ಮನೆಯಲ್ಲಿನ ಅವರ ಜರ್ನಿಯ ಬಗ್ಗೆ ಸ್ಪೆಷಲ್ ವಿಡಿಯೋ ಒಂದನ್ನು ಪ್ರತಿಸ್ಪರ್ಧಿಗಳಿಗೆ ತೋರಿಸುವಂತೆ ಇವರಿಗೂ ತೋರಿಸಿದರು. ಇನ್ನು ಬಿಗ್ ಬಾಸ್ ಮನೆಯಲ್ಲಿನ ತಮ್ಮ ಜರ್ನಿಯ ವಿಡಿಯೋವನ್ನು ನೋಡಿದ ನಂತರ ಚೈತ್ರಾ ವಾಸುದೇವನ್ ಅವರು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧವೇ ಕೊಂಕು ಮಾತನ್ನು ಆಡಿದರು.
ಹೌದು ಫೈವ್ ಸ್ಟಾರ್ ಹೋಟೆಲ್ ಎಂಬುದು ನಾನು ಹೇಳಿದ ಮಾತಲ್ಲ ನನಗೂ ಆ ವಿಷಯಕ್ಕೂ ಸಂಬಂಧವೇ ಇಲ್ಲ ಅದನ್ನ ವಿಡಿಯೋದಲ್ಲಿ ಹಾಕಿದ್ದೀರಾ , ವಿಡಿಯೋ ಪೂರ್ತಿ ಮೇಕಪ್ ಇಲ್ಲದದ್ದನ್ನೇ ತೋರಿಸಿದ್ದೀರಾ ನಾನು ಮೇಕಪ್ ಮಾಡಿಕೊಂಡ ನಂತರದ ವಿಡಿಯೋವನ್ನು ಹಾಕೇ ಇಲ್ಲ ಎಂದು ಚೈತ್ರಾ ವಾಸುದೇವನ್ ಅವರು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧವೇ ಟೀಕೆ ಮಾಡಿದರು. ಇನ್ನು ಚೈತ್ರಾ ವಾಸುದೇವ ಅವರ ಈ ಕೊಂಕು ಮಾತಿಗೆ ಕೆಂಡಮಂಡಲವಾದ ಕಿಚ್ಚ ಸುದೀಪ್ ಅವರು ಇಷ್ಟು ಸೀಸನ್ ಆಯಿತು ಯಾವ ಸ್ಪರ್ಧೆಯೂ ಸಹ ನಿಮ್ಮ ರೀತಿ ಮಾತನಾಡಲಿಲ್ಲ..
ಎಲ್ಲಾ ಸ್ಪರ್ಧಿಗಳು ಸಹ ತಮ್ಮ ಜರ್ನಿ ವಿಡಿಯೋ ನೋಡಿ ಕಣ್ಣೀರು ಹಾಕುತ್ತಿದ್ದರು ಆದರೆ ನೀವು ಮಾತ್ರ ಅಹಂಕಾರದಿಂದ ಮಾತನಾಡುತ್ತಿದ್ದೀರಾ ಇದನ್ನು ಬಿಟ್ಟರೆ ಮಾತ್ರ ನೀವು ಬೆಳೆಯಲು ಸಾಧ್ಯ ಎಂದು ಚೈತ್ರಾ ಅವರಿಗೆ ಕಿಚ್ಚ ಸುದೀಪ್ ಅವರು ಟಾಂಗ್ ನೀಡಿದರು.