ರಾಮನಗರ ಜಿಲ್ಲೆಯನ್ನು ನವಮಂಗಳೂರು ಎಂದು ಮರುನಾಮಕರಣ ಮಾಡುವ ಸರ್ಕಾರದ ಚಿಂತನೆ ಬಗ್ಗೆ ಪರ – ವಿರೋಧ ಚರ್ಚೆ ಆಗುತ್ತಿದೆ. ನವ ಬೆಂಗಳೂರು ಅಂತ ರಾಮನಗರ ಜಿಲ್ಲೆಯ ಮರುನಾಮಕರಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಕುರಿತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೂಡಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ನಾನೇ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರಿಡಬೇಕು ಎಂದು ಹೇಳಿದ್ದೆ. ಅಲ್ಲದೆ ಬಿಡದಿ ಸಮೀಪ ಒಂದು ಟೌನ್ ಶಿಪ್ ಸಹ ಬರುತ್ತಿದೆ, ಕುಮಾರಸ್ವಾಮಿಯವರು ಅವರದೆ ಆದ ರೀತಿಯಲ್ಲಿ ಜಿಲ್ಲೆಯನ್ನು ಅಭಿವೃದ್ದಿಪಡಿಸಿದ್ದಾರೆ.ಆದರೆ ಈಗಿನ ಸರ್ಕಾರದ ನಿರ್ಧಾರ ನಮಗೆ ಗೊತ್ತಿಲ್ಲ ಎಂದಿದ್ದಾರೆ.
ನಮ್ಮನ್ನು ಅಲ್ಲಿರುವ ಯಾವ ಶಾಸಕರು ಸಂಪರ್ಕಿಸಿಲ್ಲ, ಅಭಿಪ್ರಾಯವನ್ನು ಸಹ ಕೇಳಿಲ್ಲ ಎಲ್ಲಾ ಅವರ ಪರಮಾಧಿಕಾರ, ನಮ್ಮ 15 ಜನ ಶಾಸಕರು ಅವರಿಗೆ ಪರಮಾಧಿಕಾರ ಕೊಟ್ಟಿದ್ದಾರೆ. ಪೆನ್ನು ಪೇಪರ್ ಎಲ್ಲಾ ಅವರ ಕೈಯಲ್ಲೆ ಇದೆ ಏನೇನು ಮಾಡ್ತಾರೋ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಆರ್.ಅಶೋಕ್ ಏನೇನು ಮಾಡ್ತಾರೆ ಮಾಡಲಿ, ಐ ವಿಶ್ ದೆಮ್ ಆಲ್ ದಿ ಬೆಸ್ಟ್ , ಗುಡ್ ಲಕ್ ದೆಮ್ ಎಂದು ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.