ಬಿಜೆಪಿಯ ಆಂತರಿಕ ಕಿತ್ತಾಟ ಎಲ್ಲವನ್ನು ಪಾರ್ಟಿ ನೋಡಿಕೊಳ್ಳುತ್ತೆ: ಆರ್. ಅಶೋಕ್
ಬೆಂಗಳೂರು: ಬಿಜೆಪಿಯ ಆಂತರಿಕ ಕಿತ್ತಾಟ ಎಲ್ಲವನ್ನು ಪಾರ್ಟಿ ನೋಡಿಕೊಳ್ಳುತ್ತೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಯತ್ನಾಳ್ ಟೀಂ ಮತ್ತು ರೇಣುಕಾಚಾರ್ಯ ಟೀಂಗಳಿಂದ ಪದೇ ಪದೇ ಸಭೆ ಮಾಡುತ್ತಿರುವ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಂತರಿಕ ಕಿತ್ತಾಟ ಎಲ್ಲವನ್ನು ಪಾರ್ಟಿ ನೋಡಿಕೊಳ್ಳುತ್ತೆ.ನಾನು ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ.
ಯಡಿಯೂರಪ್ಪ, ಅನಂತ್ ಕುಮಾರ್, ನಾವೆಲ್ಲ ಪಾರ್ಟಿ ಕಟ್ಟಿ ಬೆಳೆಸಿದ್ದೇವೆ. ಪಾರ್ಟಿಗೆ ಸಂಬಂಧಿಸಿದ ವಿಷಯ ಇದ್ದರೆ ನಾಲ್ಕು ಗೋಡೆ ಮಧ್ಯೆ ಮಾತಾಡ್ತೀವಿ. ನಮ್ಮದು ಕೇಡರ್ ಪಾರ್ಟ್. ಭಿನ್ನಮತದ ವಿಚಾರಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ ಅಂತ ತಿಳಿಸಿದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆಗೆ ಯತ್ನಾಳ್ ಟೀಂನಿಂದ ಸ್ಪರ್ಧೆ ಮಾಡೋ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಪ್ರತಿಕ್ರಿಯೆ ಇನ್ನು ಶುರುವಾಗಿಲ್ಲ. ಚುನಾವಣೆ ಘೋಷಣೆ ಆಗಿಲ್ಲ ಅಂದ ಮೇಲೆ ಏನು ಪ್ರತಿಕ್ರಿಯೆ ಕೊಡಲಿ ಎಂದರು.