ಬಿಜೆಪಿಯವರು ಪ್ರಚಾರ ಮಾಡಿಕೊಂಡು ಜನರಿಗೆ ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಮಧು ಬಂಗಾರಪ್ಪ
ಬೆಂಗಳೂರು: ಬಿಜೆಪಿಯವರು ಪ್ರಚಾರ ಮಾಡಿಕೊಂಡು ಜನರಿಗೆ ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಯಾರಿಗೆ ಜಮೀನು ಸೇರಬೇಕೋ ಅವರಿಗೆ ಸೇರುತ್ತದೆ. ಯಾರೋ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಸುಳ್ಳು. ಈ ಬಗ್ಗೆ ದಾಖಲಾತಿ ಇರುತ್ತದೆ. ಯಾರು ತೆಗೆದುಕೊಂಡು ಹೋಗಿಲ್ಲ. ಎಲ್ಲದ್ದಕ್ಕೂ ಕಾನೂನು ಇದೆ.
ಬಿಜೆಪಿಯವರು ಪ್ರಚಾರ ಮಾಡಿಕೊಂಡು ಜನರಿಗೆ ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಚುನಾವಣೆ ಮುಗೀತು, ಈಗ ಬಿಜೆಪಿಯವರು ಕಡಿಮೆ ಮಾಡ್ತಾರೆ. ಫಲಿತಾಂಶ ಮುಗಿದ ಮೇಲೆ ಏನ್ ಫಿಟ್ಟಿಂಗ್ ಇಡಬೇಕು ಎಂದು ಯೋಚನೆ ಮಾಡ್ತಾರೆ. ಇದೆಲ್ಲ ನಡೆಯೋದಿಲ್ಲ. ಪ್ರತಿಭಟನೆ ಮಾಡಲಿ, ಊರು ಊರಲ್ಲಿ ಮಾಡಲಿ. ಪಬ್ಲಿಸಿಟಿ ಸಿಗಲಿ ಎಂದು ಮಾಡ್ತಿದ್ದಾರೆ ಮಾಡಲಿ ಎಂದು ಹೇಳಿದ್ದಾರೆ.