ಬಿಜೆಪಿ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ !

Date:

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಅಲ್ಲ.
ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐಗೆ ಕೇಸ್ ಕೊಡಿ ಎಂದು ಸಿಎಸ್ಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವಾ? ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅಂದಿನ ಅಡ್ವೊಕೇಟ್ ಜನರಲ್ ಅವರು ಹೇಳಿದ್ರು, ಈಗ ನಮ್ಮ ಎಜಿ ಅವರು ನಮಗೆ ಅದನ್ನು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ.
ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ ರೀತಿ ಆಗುತ್ತೆ. ಸರ್ಕಾರ ಕೇಸ್ ವಾಪಸ್ ಪಡೆದಿದೆ. ಮುಂದೆ ಏನ್ ಆಗುತ್ತೆ ಗೊತ್ತಿಲ್ಲ. ನಾವು ಕೋರ್ಟ್ಗೆ ಕ್ಯಾಬಿನೆಟ್ ನಿರ್ಧಾರ ಸಲ್ಲಿಕೆ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಏನಾಗಿದೆ ಅಂತ ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಕೋರ್ಟ್, ಸಿಬಿಐ ಏನು ಮಾಡುತ್ತೆ ಅವರಿಗೆ ಬಿಟ್ಟ ವಿಚಾರ. ನಾವು ಅದರ ಬಗ್ಗೆ ಮೊದಲೇ ಮಾತಾಡೋದು ಸರಿಯಲ್ಲ ಎಂದರು.

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...