ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ?: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ? ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಮುಡಾ ಕೇಸ್‌ನಲ್ಲಿ ಸಿಎಂಗೆ ಲೋಕಾಯುಕ್ತ ಕ್ಲೀನ್‌ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,
ಸಿದ್ದರಾಮಯ್ಯ ಅವರದ್ದು ಏನೇ ತಪ್ಪು ಇಲ್ಲದೇ ಹೋದರು ಪಾದಯಾತ್ರೆ ಮಾಡಿದ್ರು. ಈಗ ಕ್ಲೀನ್‌ಚಿಟ್ ಸಿಕ್ಕಿದೆ. ಇದರ ಹೊಣೆ ಈಗ ಬಿಜೆಪಿ-ಜೆಡಿಎಸ್‌ನವರು ಹೊರಬೇಕು. ಸಿಬಿಐ ತನಿಖೆ ಬೇಡ ಎಂದು ಕೋರ್ಟ್ ಹೇಳಿತ್ತು.
ಲೋಕಾಯುಕ್ತಗೆ ವರದಿ ಕೊಟ್ಟಿದೆ. ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ? ಬಿಜೆಪಿಯವರು ಮಂಡು ಬಿದ್ದಿದ್ದಾರೆ ಎಂದು ಹೇಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.