ಬಿಜೆಪಿ ಗೆಲ್ಲಲು ಡಿಸಿಎಂ ಪರಮೇಶ್ವರ್ ಕಾರಣ !?

admin
0 Min Read

ಬಸವರಾಜು ಗೆಲ್ಲಿಸಲು ಡಿಸಿಎಂ ಪರಮೇಶ್ವರ್ ಸಾಥ್ ಕೊಟ್ಟಿದ್ದಾರೆ. ಬಿಜೆಪಿ ಗೆಲ್ಲಿಸುವಲ್ಲಿ ಪರಮೇಶ್ವರ್ ಸಹಕಾರ ನೂರಕ್ಕೆ ಸಾವಿರಪಟ್ಟು ಇದೆ. ಪರಮೇಶ್ವರ್ ಸಹಕಾರ ಬಿಜೆಪಿಗೆ ಸಂಪೂರ್ಣ ಸಿಕ್ಕಿದೆ. ಬಿಜೆಪಿ ಮುಖಂಡನಾಗಿ ನಾನು ಹತ್ತಿರದಿಂದ ನೋಡಿದ್ದೇನೆ ಎಂದು ರಾಮಾಂಜನೇಯ ಹೇಳಿದ್ದಾರೆ.

ಹಾಗೇ ಮೋದಿ ಕೈ ಬಲಪಡಿಸಲು ಸಹಕರಿಸಿದ ಪರಮೇಶ್ವರ್ ಗೆ ಧನ್ಯವಾದ ತಿಳಿಸಿದ ಅವರು, ಪರಮೇಶ್ವರ್ ಚಾಣಾಕ್ಷತನ ದೇವೆಗೌಡರ ಚಾಣಾಕ್ಷತೆಗಿಂತ ಮೀರಿದ್ದು. ಪ್ಲಾನ್ ಮಾಡಿ ದೇವೇಗೌಡರನ್ನು ಸೋಲಿಸಿ ಸೇಡು ತೀರಿಸಿಕೊಂಡ್ರು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Share This Article
Leave a Comment