ಬೆಂಗಳೂರು: ಇಡೀ ರಾಜ್ಯದ ಮತದಾರರು ಬಿಜೆಪಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಜನರ ಆರ್ಶೀವಾದದಿಂದ ಈ ಬಾರಿ ಕೂಡ ಗೆಲುವಾಗ್ತಿದೆ. ತೇಜಸ್ವಿ ಸೂರ್ಯ ಮತ್ತೆ ಸಂಸದ ಆಗಬೇಕು ಅಂತಾ ಆರ್ಶೀವಾದ ಮಾಡಿದ್ದಾರೆ.
ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸ್ತೀನೆ. ಮೊದಲಬಾರಿ ಗೆದ್ದಾಗ ಒಂದು ಲೆಟರ್ ಹೆಡ್ ಮಾಡೋದಕ್ಕೂ ಬರ್ತಿರಲಿಲ್ಲ. ಈ 5 ವರ್ಷ ಸಾಕಷ್ಟು ಕಲಿತಿದ್ದೇನೆ. ಇಡೀ ರಾಜ್ಯದ ಮತದಾರರು ಬಿಜೆಪಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ. 290 ಕ್ಷೇತ್ರದಲ್ಲಿ ಅಂತರದ ಡಿಫ್ರೆನ್ಸ್ ಇದೆ. ಇನ್ನೆರಡು ಗಂಟೆಯಲ್ಲಿ ಕ್ಲಿಯರ್ ಪಿಚ್ಚರ್ ಸಿಗುತ್ತೆ.
ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿಯಾಗ್ತಾರೆ. ಹತ್ತು ವರ್ಷ ಹೇಗಿದ್ರೋ ಹಾಗೇ ಮುಂದುವರಿಸುತ್ತಾರೆ. ಒಂದು ವರ್ಷದ ಹಿಂದೆ ಸರ್ಕಾರ ಅಧಿಕಾರಕ್ಕೆ ಬಂದ್ರು ಕಾಂಗ್ರೆಸ್ ಕುಗ್ಗಿದೆ. ಒಂದೇ ವರ್ಷದಲ್ಲಿ ಜನಪ್ರಿಯತೆ ಕುಗ್ಗಿರೋದು ಅವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಬಿಜೆಪಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ ತೇಜಸ್ವಿ ಸೂರ್ಯ !
Date: