ಬಿಡುಗಡೆಯಾಗಿದೆ ಆದಾಯ ತೆರಿಗೆ ಕ್ಯಾಲೆಂಡರ್! ಏನಿದರ ಉಪಯೋಗ?

Date:

ನವದೆಹಲಿ : ಭಾರತೀಯ ಆದಾಯ ತೆರಿಗೆ ಇಲಾಖೆಯು 2020ರ ಹೊಸ ಕ್ಯಾಲೆಂಡರ್ ಅನ್ನು ಹೊರತಂದಿದ್ದು, ಇನ್ಮುಂದೆ ತೆರಿಗೆ ಸಂಬಂದಿಂತ ವಿಚಾರಗಳ ಪ್ರಮುಖ ವಿಚಾರಗಳು ಬಹಳ ಸುಲಭವಾಗಿದೆ. ತೆರಿಗೆ ಸಂಬಂಧಿತ ವಿಷಯಗಳ ಪ್ರಮುಖ ದಿನಾಂಕಗಳ ಮಾಹಿತಿಯನ್ನು ಈ ಕ್ಯಾಲೆಂಡರ್ ಒಳಗೊಂಡಿದೆ.
ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ನ ಕ್ಯಾಲೆಂಡರ್ 2020ರಲ್ಲಿ ತೆರಿಗೆ ಪಾವತಿದಾರರಿಗೆ ಆದಾಯ ಪ್ರಮಾಣಪತ್ರ ಸಲ್ಲಿಸಲು ತೊಂದರೆಯಾಗದಂತೆ ಪ್ರಮುಖ ದಿನಾಂಕಗಳ ಮಾರ್ಗದರ್ಶನ ನೀಡಲಿದೆ. ಇನ್ಕಂ ಟ್ಯಾಕ್ಸ್ ರಿಟರ್ನ್ಸ್ನ ಸುಲಭ ಮಾರ್ಗಸೂಚಿಗಳ ಜೊತೆಗೆ ಐಟಿಆರ್ ಅನ್ನು ಸಲ್ಲಿಸುವ ಪ್ರಮಾಣವನ್ನು ಸಹಾ ತೋರಿಸಲಿದೆ. 2019ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬಾಕಿ ಇರುವ ಟಿಸಿಎಸ್ ಮತ್ತು ಟಿಡಿಎಸ್ ಮರುಪಾವತಿ ಮಾಡಲು ಈ ಕ್ಯಾಲೆಂಡರ್ ನೆನಪಿಸುತ್ತದೆ.

ಕ್ಯಾಲೆಂಡರ್ನಲ್ಲಿರುವ ಪ್ರಮುಖ ದಿನಾಂಕಗಳು
ಮಾರ್ಚ್ 31- ಮೌಲ್ಯಮಾಪನ ಪೂರ್ಣಗೊಳ್ಳದ 2019-20ರ ವಾರ್ಷಿಕ ವರ್ಷದಲ್ಲಿ ತಡವಾಗಿ ಅಥವಾ ಪರಿಷ್ಕೃತ ಆದಾಯ ಸಲ್ಲಿಸುವ ಕೊನೆಯ ದಿನಾಂಕ
* ಮೇ 15- 2020ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಿಸಿಎಸ್ ತ್ರೈಮಾಸಿಕ
* ಮೇ 31- 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟಿನ ಹೇಳಿಕೆಗಳು
* ಜೂನ್ 15- 2019-20ನೇ ಹಣಕಾಸು ವರ್ಷದಲ್ಲಿ ಪಾವತಿಸಿದ ಸಂಬಳ ಮತ್ತು ತೆರಿಗೆಯ ಕಡಿತಕ್ಕೆ ಸಂಬಂಧಿಸಿದಂತೆ ನೌಕರರಿಗೆ ಟಿಡಿಎಸ್ ಪ್ರಮಾಣಪತ್ರ. 2021-22ಕ್ಕೆ ಮುಂಗಡ ತೆರಿಗೆಯ ಮೊದಲ ಕಂತು
* ಜುಲೈ 24- ಆದಾಯ ತೆರಿಗೆ ದಿನಾಚರಣೆ
* ಜುಲೈ 31- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಎಲ್ಲ ಮೌಲ್ಯಮಾಪನಗಳ ವಾರ್ಷಿಕ ವರ್ಷ 2020-21ರ ಐಟಿಆರ್ ಖಾತೆ ಲೆಕ್ಕಪರಿಶೋಧನೆ
* ಸೆಪ್ಟೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು
* ಸೆಪ್ಟೆಂಬರ್ 30- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಮೌಲ್ಯಮಾಪಕದ ವಾರ್ಷಿಕ ವರ್ಷ 2020-21ರ ಐಟಿಆರ್ ಪುಸ್ತಕಗಳ ಲೆಕ್ಕಪರಿಶೋಧನೆ
* ನವೆಂಬರ್ 30- ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶಿಯ ವಹಿವಾಟು ಹೊಂದಿರುವ ಮೌಲ್ಯಮಾಪಕರಿಗೆ ಸಂಬಂಧಿಸಿದ ವಾರ್ಷಿಕ ವರ್ಷ 2020-21ರ ಲೆಕ್ಕಪರಿಶೋಧನಾ ವರದಿ ಮತ್ತು ಐಟಿಆರ್ ದಿನ
* ಡಿಸೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು ದಿನ

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...