ಬೀದರ್ ಹುಡುಗನಿಗೆ ಇಂಗ್ಲೆಂಡ್ ಪಾರ್ಲಿಮೆಂಟರ್ ಲೀಡರ್ಶಿಪ್

Date:

ಬೀದರ್ ಹುಡುಗನಿಗೆ ಇಂಗ್ಲೆಂಡ್ ಪಾರ್ಲಿಮೆಂಟರ್ ಲೀಡರ್ಶಿಪ್

ಲಂಡನ್‌ನಲ್ಲಿರುವ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿ ಆಗಿ ಆಯ್ಕೆಯಾಗಿ ಗಮನ ಸೆಳೆದಿದ್ದ ಬೀದರ್ ನಗರದ ಪ್ರತಿಭಾವಂತ ವಿದ್ಯಾರ್ಥಿ ಆದೀಶ್ ಡಾ. ರಜನೀಶ್ ವಾಲಿ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.
ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತ ಫೇಥ್ ಆ್ಯಂಡ್ ಬಿಲೀಫ್ ಫೋರಂನ ಪಾರ್ಲಿಮೆಂಟರ್ ಲೀಡರ್‌ಶಿಪ್ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವ ಸದಾವಕಾಶ ಪಡೆದುಕೊಂಡಿದ್ದಾರೆ. ಈ ಅವಕಾಶ ಪಡೆದ, ಏಕೈಕ ಭಾರತೀಯ, ಅದರಲ್ಲೂ ಕನ್ನಡಿಗ ಎನ್ನುವುದು ವಿಶೇಷ.

ಫೇಥ್ ಆ್ಯಂಡ್ ಬಿಲೀಫ್ ಫೋರಂ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಸಂಸ್ಥೆಯಾಗಿದ್ದು, ವಿಶ್ವಸಂಸ್ಥೆಯಿಂದ ಪುರಸ್ಕಾರ ಪಡೆದಿದೆ. ಈ ಸಂಸ್ಥೆಯು ಪ್ರತಿ ವರ್ಷ ಯುವ ನಾಯಕತ್ವ ಬೆಳವಣಿಗೆ ಮತ್ತು ಯುವಕರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಉದ್ಯಮ ಸ್ಥಾಪನೆ, ತಂತ್ರಜ್ಞಾನ ಬಳಕೆ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ಪರಿಪೂರ್ಣತೆ ಪಡೆದುಕೊಳ್ಳಲು ನೆರವಾಗುವ ಪಾರ್ಲಿಮೆಂಟರ್ ಲೀಡರ್‌ಶಿಪ್ ಪ್ರೋಗ್ರಾಂ ರೂಪಿಸಿದೆ.
ನಾಯಕತ್ವ ಗುಣ ಇರುವ ಮತ್ತು ಯುವ ಉದ್ಯಮಿಗಳನ್ನು ಈ ಪ್ರತಿಷ್ಠಿತ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. 2020-21ನೇ ಸಾಲಿಗಾಗಿ ಐವರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಆಯ್ಕೆಯಾಗಿರುವ ಆದೀಶ್ ವಾಲಿ ಏಕೈಕ ಭಾರತೀಯರು. ಮೇಲಾಗಿ ಕನ್ನಡಿಗರು ಎನ್ನುವುದು ವಿಶೇಷ ಸಂಗತಿ.
ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ಅಡಿ ಆಯ್ಕೆಯಾದವರು ಇಂಗ್ಲೆಂಡ್ ಲೋಕಸಭಾ ಸದಸ್ಯೆ ತೈವೊ ಅವರೊಂದಿಗೆ ರಾಜಕೀಯ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.
ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ಅಡಿ ಆಯ್ಕೆಯಾದವರು ಇಂಗ್ಲೆಂಡ್ ಲೋಕಸಭಾ ಸದಸ್ಯೆ ತೈವೊ ಅವರೊಂದಿಗೆ ರಾಜಕೀಯ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.
ಇಂಗ್ಲೆಂಡ್‌ನ ಪಾರ್ಲಿಮೆಂಟ್ ಆಗಿರುವ ವೆಸ್ಟ್ ಮಿನಿಸ್ಟರ್ ಕಲಾಪದಲ್ಲಿ ಭಾಗಿಯಾಗಬಹುದು. ಅಲ್ಲಿನ ಪ್ರಧಾನಿಯವರು ಪಾಲ್ಗೊಳ್ಳುವ ಅಧಿವೇಶನದಲ್ಲೂ ಪಾಲ್ಗೊಳ್ಳಬಹುದು.
ಇದರ ಜೊತೆಗೆ ಇಂಗ್ಲೆಂಡ್‌ನ ಹೆಸರಾಂತ ಕಂಪೆನಿಗಳ ಸಿಇಒ ಮತ್ತು ನಿರ್ದೇಶಕರನ್ನು ಭೇಟಿಯಾಗುವ, ಕಾರ್ಯ ವಿಧಾನ ತಿಳಿದುಕೊಳ್ಳುವ ಅವಕಾಶವೂ ಇರುತ್ತದೆ.
ಉದ್ಯಮ ಕ್ಷೇತ್ರದಲ್ಲಿನ ಒಳಹೊರಗನ್ನು ತಿಳಿದುಕೊಳ್ಳುವ ಅವಕಾಶವೂ ಲಭಿಸುತ್ತದೆ. ವರ್ಷದ ಅವಧಿ ಪೂರ್ಣಗೊಂಡ ನಂತರ ವೈವಿಧ್ಯಪೂರ್ಣ ಕಾರ್ಯಕ್ರಮ ನಡೆಸಿ ಪದವಿ ಪ್ರದಾನ ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ, ಜಾಗತಿಕ ಮನ್ನಣೆ ಇರುವ ಸಂಸ್ಥೆಯೊಂದರ ಮಹತ್ವದ ಯೋಜನೆಯಡಿ ಆದೀಶ್ ರಜನೀಶ ವಾಲಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜಿಲ್ಲೆಯ, ರಾಜ್ಯದ, ದೇಶದ ಗೌರವ ಹೆಚ್ಚಿಸಿದ್ದಾರೆ.


ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಗೊಂಡ ಕೊರೊನಾ ವೈರಸ್‌ ನಿಯಂತ್ರಿಸುವ ಸಂಬಂಧ ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಕೋಲಾರ ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿ ಮಾಡುವ ಸಂಬಂಧ ಚರ್ಚೆ ನಡೆದಿತ್ತು. ಇದೀಗ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೂ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ ಎಂದರು.
ಈ ವಿಚಾರದಲ್ಲಿ ಅಬಕಾರಿ ಇಲಾಖೆ ಪಾಲು ಜಾಸ್ತಿ ಇದೆ ಎಂದ ಸಚಿವರು, ನಾವು ಸಡಿಲ ಬಿಟ್ಟರೆ ಕೊರೊನಾ ಎಫೆಕ್ಟ್ ಜಾಸ್ತಿಯಾಗಬಹುದು ಎಂದರು. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, 11 ಗಂಟೆಯ ಬಳಿಯ ಯಾವುದೇ ಬಾರ್‌, ವೈನ್‌ಶಾಪ್‌, ಲಿಕ್ಕರ್‌ಶಾಪ್‌, ಪಬ್‌ ಮುಂತಾದವುಗಳು ನಡೆಯಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಅವುಗಳನ್ನು ತೆರೆದಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಗಿ ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್‌. ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಸಂಬಂಧ ಇಮೇಲ್ ಮೂಲಕವೂ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.
ಕೊರೊನಾ 2ನೇ ಅಲೆ ಬ್ರಿಟನ್‌ನಿಂದ ಬಂದಿರುವುದರಿಂದಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮುಂದುವರಿಸಲಾಗುವುದು, ಇಲ್ಲವಾದಲ್ಲಿ ತೆಗೆದು ಹಾಕಲಾಗುವುದು ಎಂದು ನಾಗೇಶ್ ಮಾಹಿತಿ ನೀಡಿದರು. ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಒಟ್ಟಾರೆ ಕರ್ಫ್ಯೂದಿಂದಾಗಿ ಕೊರೊನಾ ಬಗ್ಗೆ ಜನರಲ್ಲಿಯೂ ಹೆಚ್ಚಿನ ಜಾಗೃತಿ ಮೂಡಲು ಸಹಕಾರಿಯಾಗುವುದು ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...