ಬೀದಿನಾಯಿಗೆ ಊಟ ಹಾಕಿದ ಮಹಿಳೆಗೆ 8 ಲಕ್ಷ ದಂಡ!

Date:

ಬೀದಿನಾಯಿಗಳಿಗೆ ಅನ್ನ ಹಾಕಿದ್ದಕ್ಕೂ ದಂಡ ತೆರಬೇಕಾದ ಪರಿಸ್ಥಿತಿ ಮಹಿಳೆಯೊಬ್ಬರಿಗೆ ಎದುರಾಗಿದೆ. ಅಷ್ಟಕ್ಕೂ ಅದು ಹತ್ತು, ನೂರು, ಸಾವಿರ ರೂಪಾಯಿಗಳಲ್ಲಲ್ಲ.. 8 ಲಕ್ಷ ರೂಪಾಯಿಗೂ ಅಧಿಕ!

ನವಿ ಮುಂಬೈನ ಎನ್​ಆರ್​ಐ ಕಾಂಪ್ಲೆಕ್ಸ್​ನ ಆಡಳಿತ ಸಮಿತಿ, ಒಟ್ಟು 8 ಲಕ್ಷ ರೂಪಾಯಿಗೂ ಅಧಿಕ ದಂಡ ತೆರುವಂತೆ ಅಲ್ಲಿನ ನಿವಾಸಿಗರೊಬ್ಬರಿಗೆ ತಾಕೀತು ಮಾಡಿದೆ.

ಈ ಬೃಹತ್ ವಸತಿ ಸಂಕೀರ್ಣದಲ್ಲಿ ವಾಸವಿರುವ ಅಂಶು ಸಿಂಗ್ ಎಂಬ ಮಹಿಳೆ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ನಿವಾಸಿಗರು ಕಾಂಪ್ಲೆಕ್ಸ್ ಆವರಣದೊಳಗೆ ಬೀದಿನಾಯಿಗಳಿಗೆ ಅನ್ನ-ತಿಂಡಿ ಹಾಕಿದರೆ ದಂಡ ವಿಧಿಸುವ ಪರಿಪಾಠವನ್ನು ಸಮಿತಿ ಇಟ್ಟುಕೊಂಡಿದೆ. ಯಾರಾದರೂ ಬೀದಿನಾಯಿಗಳಿಗೆ ಅನ್ನ ಹಾಕಿದರೆ ದಿನಕ್ಕೆ 5 ಸಾವಿರ ರೂಪಾಯಿಯಂತೆ ಈ ಸಮಿತಿ ದಂಡ ವಿಧಿಸುತ್ತದೆ. ಅಂಶು ಅವರು ಜುಲೈನಿಂದ ಅನ್ನ ಹಾಕುತ್ತಿದ್ದು, ಅವರು ಒಟ್ಟು 8 ಲಕ್ಷ ರೂಪಾಯಿಗೂ ಅಧಿಕ ದಂಡ ನೀಡಬೇಕು ಎಂದು ನೋಟಿಸ್ ನೀಡಿದೆ.

 

ಇನ್ನೊಬ್ಬ ನಿವಾಸಿ ಲೀಲಾ ವರ್ಮಾ ಎಂಬವರಿಗೂ ಬೀದಿನಾಯಿಗೆ ಅನ್ನ ಹಾಕಿದ್ದಕ್ಕೆ ದಂಡ ಹಾಕಲಾಗಿದ್ದು, ಅವರ ದಂಡದ ಮೊತ್ತ 6 ಲಕ್ಷ ರೂಪಾಯಿಗೂ ಅಧಿಕ. ಇಲ್ಲಿನ ಸೆಕ್ಯುರಿಟಿ ಗಾರ್ಡ್ ಬೀದಿನಾಯಿಗೆ ಅನ್ನ ಹಾಕುವವರ ಹೆಸರನ್ನು ನೋಟ್ ಮಾಡಿಕೊಂಡು ಸಮಿತಿಗೆ ನೀಡುತ್ತಿದ್ದು, ಆ ಪ್ರಕಾರ ದಂಡ ಹಾಕುತ್ತಿದ್ದಾರೆ ಎಂದು ಅಂಶು ಹೇಳಿಕೊಂಡಿದ್ದಾರೆ.

ಬೀದಿನಾಯಿಗಳಿಂದಾಗಿ ಟ್ಯೂಷನ್​ಗೆ ಹೋಗುವ ಮಕ್ಕಳು ಭಯದಲ್ಲೇ ಓಡಾಡುವಂತಾಗಿದೆ. ಮತ್ತೊಂದೆಡೆ ವಯಸ್ಸಾದವರು ಕೂಡ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನಾಯಿಗಳ ಬೊಗಳುವಿಕೆಯಿಂದ ರಾತ್ರಿ ನೆಮ್ಮದಿಯಲ್ಲಿ ನಿದ್ರೆ ಮಾಡಲಿಕ್ಕೂ ತೊಂದರೆ ಆಗುತ್ತದೆ. ಅದೇ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಅಷ್ಟಕ್ಕೂ ಬೀದಿನಾಯಿಗಳಿಗೆ ಅನ್ನ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವರು ತೆರೆದ ಪ್ರದೇಶದಲ್ಲಿ ಹಾಕುತ್ತಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಸಮಜಾಯಿಷಿ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...