ಬೆಂಗಳೂರು:- ಇವರಿಗೆ ಯಾವ ಪೊಲೀಸ್ ಭಯವೂ ಇಲ್ಲ, ಲಾ ಅಂಡ್ ಆರ್ಡರ್ ಗೆ ಕ್ಯಾರೆನೂ ಅನ್ನ ಅಂತಹ ಮೊಂಡು ಬಿದ್ದಿರುವ ಬೀದಿ ಕಾಮುಕರು. ಹೆಣ್ಣು ಮಕ್ಕಳು ಹೊರಗೆ ಬರೋದನ್ನೇ ಕಾಯುವ ಈ ನೀಚರಿಗೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಅದರಂತೆ ನಗರದಲ್ಲಿ ಯುವತಿಯೊಬ್ಬಳು ಬೀದಿ ಕಾಮುಕರ ಕಿರುಕುಳಕ್ಕೆ ಒಳಗಾಗಿದ್ದಾರೆ. ಹೆಣ್ಣೂರು ಮುಖ್ಯ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇಬ್ಬರು ಅಪರಿಚಿತರು ಯುವತಿಯ ಸ್ಕೂಟರ್ ಅನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯುವತಿಯು, ತನ್ನ ಸ್ನೇಹಿತರ ಮನೆಯಿಂದ ಬೆಳಗ್ಗಿನ ಜಾವ 4.30 ರ ವೇಳೆ ಸ್ಕೂಟರ್ನಲ್ಲಿ ಹೊರಟ್ಟಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಕೂಟರ್ ಹಿಂಬಾಲಿಸಿಕೊಂಡು ಬಂದಿದ್ದು, ಅಡ್ಡ ಹಾಕಿ ಖಾಸಗಿ ಭಾಗ ಟಚ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಕಾಮುಕರನ್ನ ಹಿಡಿಯಲು ಬಂದ ಸಾರ್ವಜನಿಕರಿಗೆ ಚಾಕು ತೋರಿಸಿ ಪರಾರಿಯಾಗಿದ್ದಾರೆ.
ಸದ್ಯ ಬಾಣಸವಾಡಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.