ಬೀದಿ ಬೀದಿಗಳಲ್ಲಿ ಶರ್ಟ್ ಮಾರಿದ್ದ ವ್ಯಕ್ತಿ ಇಂದು ಏನಾಗಿದ್ದಾರೆ ಗೊತ್ತಾ?

Date:

ಬೀದಿ ಬೀದಿಗಳಲ್ಲಿ ಶರ್ಟ್ ಮಾರಿದ್ದ ವ್ಯಕ್ತಿ ಇಂದು ಏನಾಗಿದ್ದಾರೆ ಗೊತ್ತಾ?

ರಾಜನಾಯಕ್. ಒಂದು ಚಿಕ್ಕ ಬಡ ಕುಟುಂಬದಲ್ಲಿ ಜನಿಸಿದ ರಾಜು ನಾಯಕ. ಮನೆಬಿಟ್ಟು ಬಂದು ಬೀದಿ ವ್ಯಾಪಾರ ಮಾಡುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ, ಈಗ ಸುಮಾರು 60 ಕೋಟಿ ರೂಪಾಯಿ ವರಗೆ ವಹಿವಾಟು ಮಾಡುತ್ತಿದ್ದಾರೆ.

ಇದು ಸಾಮಾನ್ಯವಾದ ಸಾಧನೆಯಲ್ಲ. ಮೊದಲು ರಾಜು ನಾಯಕ್ ಅವರು ಸ್ನೇಹಿತನ ಜೊತೆಗೂಡಿ 5 ಸಾವಿರ ಹಣ ಹೂಡಿ ಮಾರುಕಟ್ಟೆಯಲ್ಲಿ ತಿರಸ್ಕರಿಸಿದ ಬಟ್ಟೆಗಳನ್ನು ಕೊಂಡುಕೊಂಡು ಪುಟ್ ಪಾತ್ ಮೇಲಿಟ್ಟು ವ್ಯಾಪಾರ ಮಾಡಲು ಶುರುಮಾಡಿದರು.
ರಾಜು ಅವರ ಬಾಲ್ಯದ ದಿನಗಳ ಬಗ್ಗೆ ಹೇಳಬೇಕೆಂದರೆ, ಅವರದು ತುಂಬಾ ಬಡ ಕುಟುಂಬವಾದರಿಂದ ತಿನ್ನಲು ಸರಿಯಾದ ಊಟವು ಇರಲಿಲ್ಲ. 5 ಮಕ್ಕಳಿದ್ದರು ತಂದೆ ಮನೆಯ ಜವಾಬ್ದಾರಿಯನ್ನು ವಹಿಸಲಿಲ್ಲ. ಒಡಹುಟ್ಟಿದವರಲ್ಲಿ ರಾಜು ಅವರು ಹಿರಿಯರಾಗಿದ್ದರು.
ರಾಜು ಅವರಿಗೆ ಶಾಲೆಯ ಫೀಸ್ ಕಟ್ಟಲು ಹಣವಿಲ್ಲದೆ ಎಷ್ಟೋ ಬಾರಿ ಹೊರಗೆ ನಿಂತುಕೊಂಡಿದ್ದ ಪರಿಸ್ಥಿಯೂ ಇತ್ತಂತೆ. ಸಾಮಾನ್ಯ ಗೃಹಿಣಿಯಾದ ಅವರ ತಾಯಿ ಒಡವೆಗಳನ್ನು ಮಾರಿ ಹಣ ಕಟ್ಟುತ್ತಿದ್ದರು. ಶಾಲೆಯ ಊಟದ ಸಮಯದಲ್ಲಿ ಊಟವಿಲ್ಲದೆ ರಸ್ತೆಯಲ್ಲಿ ಅಲೆಯುತ್ತಿದ್ದ ರಾಜು ನಾಯಕ್ ಅವರು ಎಸ್ಎಸ್ಎಲ್ಸಿ ಪಾಸಾದ ನಂತರ ತನ್ನ ಸ್ನೇಹಿತನ ಜೊತೆ ಪಂಜಾಬ್ಗೆ ಓಡಿ ಹೋಗಿ ಅವರ ಚಿಕ್ಕಪ್ಪನ ಸಹಾಯ ಪಡೆದು ಬೀದಿಯಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ.
ಮೊದಲು ಮೈಕೋ ಫ್ಯಾಕ್ಟರಿಯ ಬಳಿ ಪಾದಚಾರಿ ಮಾರ್ಗದಲ್ಲಿ ಬಟ್ಟೆ ಮಾರಾಟ ಮಾಡಲು ನಿರ್ಧರಿಸಿದರು. ಏಕೆಂದರೆ ನೀಲಿ ಬಟ್ಟೆಗಳಾಗಿದ್ದರಿಂದ ಕಾರ್ಖಾನೆ ಕೆಲಸಗಾರರು ಬಟ್ಟೆ ತೆಗೆದುಕೊಳ್ಳುತ್ತಾರೆ ಅಂದು ವ್ಯಾಪಾರ ಮಾಡಿದೆವು. ಅದರಂತೆ ಒಳ್ಳೆಯ ಲಾಭ ಸಿಕ್ಕಿತು. ಅದೇ ಹಣದಿಂದ ತಮಿಳುನಾಡಿನ ತಿರುಪುರಕ್ಕೆ ಹೋಗಿ ಹೆಚ್ಚು ಬಟ್ಟೆಗಳನ್ನು ಖರೀದಿ ಮಾಡಿ ಬೆಂಗಳೂರಿಗೆ ಬಂದು ವ್ಯಾಪಾರ ಮಾಡಲು ಶುರುಮಾಡಿದರಂತೆ . ಅಲ್ಲಿಂದ ಎರಡೇ ವರ್ಷದಲ್ಲಿ ಉತ್ತಮ ಲಾಭ ಸಿಕ್ಕಿತ್ತು.
ಆಮೇಲೆ, ರಾಜು ನಾಯಕ್, ಕೊಲ್ಲಾಪುರ ಚಪ್ಪಲಿಗಳ ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸಿದರಂತೆ. ತದನಂತರ ನೆಲಮಂಗಲದಲ್ಲಿ ಪಂಜಾಬಿ ರೆಸ್ಟೋರೆಂಟ್ ಪ್ರಾರಂಭಿಸಿ ಅದು 3 ವರ್ಷಗಳು ನಡೆಸಿ ಯಶಸ್ವಿಯಾದ ನಂತರ ಲಾಭಕ್ಕಾಗಿ ಅದನ್ನು ಸ್ನೇಹಿತ ದೀಪಕ್ ಅವರ ಸಂಬಂಧಿಕರಿಗೆ ಮಾರಾಟಮಾಡಿದರು. ನಂತರ 1991 ರಲ್ಲಿ, ಮತ್ತೊಂದು ಪಾಲುದಾರರೊಂದಿಗೆ ರಾಜಾ ಅಕ್ಷಯ್ ಎಂಟರ್ಪ್ರೈಸಸ್ ಅನ್ನು ಪ್ರಾರಂಭಿಸಿದರು. ನಂತರ ಅವರು ಎಂಸಿಎಸ್ ಲಾಜಿಸ್ಟಿಕ್ ಇಂಟರ್ನ್ಯಾಷನಲ್ ಪ್ರೈವೇಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.


ಉದ್ಯಮಿ ರಾಜು ನಾಯಕ್ ಅವರ ಸಾಧನೆಗೆ ಸ್ಪೂರ್ತಿ ನೀಡಿದ್ದು ಬಾಲಿವುಡ್ ಸೂಪರ್ ರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ “ತ್ರಿಶೂಲ್” ಸಿನಿಮಾವಂತೆ. ಈ ಸಿನಿಮಾದ ಕತೆಯಂತೆ ರಾಜು ಅವರು ತಾವು ಏನಾದರೂ ಸಾಧನೆ ಮಾಡಲೇಬೇಕು ಅಂತ ನಿರ್ಧಾರ ಮಾಡಿದರಂತೆ. ಅದೇ ರೀತಿ ಇವರ ಸಾಧನೆಯ ಹಿಂದೆ ಸದಾ ಅವರ ಪತ್ನಿ ಬೆನ್ನೆಲುಬು ಆಗಿದ್ದಾರೆ. ಇವರ 3 ಜನ ಪುತ್ರರು ಕೂಡ ಇದೇ ಉದ್ಯಮದ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.
ಏನೇ ಹೇಳಿ, ಬೀದಿ ಬದಿ ಟಿ ಶರ್ಟ್ ಮಾರುತ್ತಿದ್ದ ವ್ಯಕ್ತಿ ಇಂದು ಕೋಟ್ಯಾದಿಪತಿ ಆಗಿದ್ದು ಸುಮ್ಮನೇ ಅಲ್ಲ. ಅವರ ಪಟ್ಟ ಶ್ರಮ. ಅದೇ ರೀತಿ ಇವರ ಸಾಧನೆ ಪ್ರತಿಯೊಬ್ಬ ಯುವಕರಿಗೂ ಮಾದರಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...