ಬುರುಡೆ ಚಿನ್ನಯ್ಯ 10 ದಿನಗಳ ಕಾಲ SIT ವಶಕ್ಕೆ – ಕೋರ್ಟ್ ಆದೇಶ
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಬುರುಡೆ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ SIT ವಶಕ್ಕೆ ನೀಡುವಂತೆ ಬೆಳ್ತಂಗಡಿ ಕೋರ್ಟ್ ಆದೇಶ ಹೊರಡಿಸಿದೆ.
ಇಂದು ಬೆಳ್ತಂಗಡಿ ಕೋರ್ಟ್ ಎದುರು ಹಾಜರುಪಡಿಸಿದ ಚಿನ್ನಯ್ಯನನ್ನು ತನಿಖೆಗೆ ಅಗತ್ಯವಿರುವುದರಿಂದ 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು SIT ಮನವಿ ಮಾಡಿತ್ತು. ಕೋರ್ಟ್ ಈ ಮನವಿಯನ್ನು ಅಂಗೀಕರಿಸಿದೆ.
ಮಾಹಿತಿಯ ಪ್ರಕಾರ, ತಾನು ಮೊದಲು ತಂದಿದ್ದ ತಲೆ ಬುರುಡೆಯ ಮೂಲವನ್ನು ಚಿನ್ನಯ್ಯ ಸ್ಪಷ್ಟಪಡಿಸದಿರುವುದೇ ಅವನನ್ನು ಬಂಧಿಸಲು ಕಾರಣವಾಗಿದೆ. ತಲೆ ಬುರುಡೆಯ ಮೂಲದ ಬಗ್ಗೆ ಚಿನ್ನಯ್ಯ ತನಿಖಾ ಅಧಿಕಾರಿಗಳಿಗೆ ಯಾವುದೇ ಸ್ಪಷ್ಟನೆ ನೀಡಲು ವಿಫಲನಾಗಿದ್ದಾನೆ.
ಇದೇ ವೇಳೆ, ಚಿನ್ನಯ್ಯಗೆ 2 ಲಕ್ಷ ರೂ. ನೀಡಿ ಸುಳ್ಳು ದೂರು ನೀಡುವಂತೆ ಒಂದು ಗ್ಯಾಂಗ್ ತರಬೇತಿ ನೀಡಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆ ಗ್ಯಾಂಗ್ ಕೊಟ್ಟ ಬುರುಡೆಯನ್ನು ಕೋರ್ಟ್ ಹಾಗೂ ಪೊಲೀಸರಿಗೆ ಒಪ್ಪಿಸಲು ಚಿನ್ನಯ್ಯ ಸಿದ್ಧನಾಗಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.