ಬೆಂಗಳೂರಿಗರಿಗೆ ಮತ್ತೊಂದು ಆಘಾತ: ಇಂದಿನಿಂದ ಆಟೋ ಪ್ರಯಾಣ ದರ ಏರಿಕೆ!

Date:

ಬೆಂಗಳೂರಿಗರಿಗೆ ಮತ್ತೊಂದು ಆಘಾತ: ಇಂದಿನಿಂದ ಆಟೋ ಪ್ರಯಾಣ ದರ ಏರಿಕೆ!

 

ಬೆಂಗಳೂರಿನಲ್ಲಿ ಇಂದಿನಿಂದ ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಡಿಸಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಆಟೋ ರಿಕ್ಷಾ ದರ ಏರಿಕೆ ಬಳಿಕ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣ ಪಡೆದರೆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆ ನಂತರ ಒಂದೂವರೆ ಪಟ್ಟು ದರ ಹೆಚ್ಚಳವಾಗಲಿದೆ.

ಮೊದಲ 2 ಕಿ.ಮೀಟರ್​ಗೆ 30 ರೂ. ಇದ್ದು, 36 ರೂ. ಗೆ ಹೆಚ್ಚಾಗಿದೆ. ಸದ್ಯ ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ 30 ರೂ ಇದೆ. ನಂತರದ ಪ್ರತಿ ಕಿಮೀ ಗೆ 18 ರೂ ನಿಗದಿ ಮಾಡಲಾಗಿದೆ. ಈ ಹಿಂದೆ ಪ್ರತಿ ಕಿಮೀ ಗೆ 15 ದರ ನಿಗದಿ ಮಾಡಲಾಗಿತ್ತು. ಎರಡು ಕಿ.ಮೀ. ಮಿನಿನಮ್​​ ದರ 6 ರೂಪಾಯಿಗೆ ಮತ್ತು ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಒನ್ ಆ್ಯಂಡ್​​​ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ) ಮಾಡಲಾಗುವುದು.

36 ರೂ ಮೂರು ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದು. ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿದ್ದು, ನಂತರ ಪ್ರತಿ ಹದಿನೈದು ನಿಮಿಷಕ್ಕೆ 10 ರೂ. 20 ಕೆಜಿ ಲಗೇಜ್​ಗೆ ಉಚಿತ ಇರಲಿದೆ. 20 ಕೆಜಿಗಿಂತ ಹೆಚ್ಚಿದರೆ 10 ರೂಪಾಯಿ ಶುಲ್ಕ ತೆರಬೇಕು. ಗರಿಷ್ಠ ಪ್ರಯಾಣಿಕರ ಲಗೇಜ್​ಗಳು 50 ಕೆಜಿ ಇದ್ದರೆ 10 ರೂ ಹಣ ನೀಡಬೇಕು.

Share post:

Subscribe

spot_imgspot_img

Popular

More like this
Related

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ಮುಂಗಾರು ಹಾಗೂ...

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...