ಬೆಂಗಳೂರಿಗರೇ ಎಚ್ಚರ: ರಾಜಧಾನಿಯಲ್ಲಿವೆ ಅಪಾಯಕಾರಿ ಒಣ ಮರಗಳು, ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್!

Date:

 

ಬೆಂಗಳೂರು:- ಬೆಂಗಳೂರಿಗರೇ ಎಚ್ಚರ, ಎಚ್ಚರ. ರಾಜಧಾನಿಯಲ್ಲಿ ಅಪಾಯಕಾರಿ ಒಣ ಮರಗಳು ಇದ್ದು, ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್ ಎನ್ನಲಾಗಿದೆ.

ನಗರದಲ್ಲಿ ಗಾಳಿ ಇಲ್ಲದಿದ್ರು ನಗರದಲ್ಲಿ ಧರೆಗೆ ಮರಗಳು ಉರುಳುತ್ತಿದ್ದು, ನೆನ್ನೆಯಷ್ಟೇ ವೈಯಾಲಿಕಾವಲ್‌ನಲ್ಲಿ ನಿನ್ನೆ ಕೂಡ ಮರ ಉರುಳಿ ಅವಾಂತರ ಸೃಷ್ಟಿಯಾಗಿತ್ತು.

ಇನ್ನೂ ಚೆನ್ನಾಗಿ ಇರೋ‌ ಮರಗಳೆ ಧರೆಗೆ ಉರುಳುತ್ತಿದ್ದರು ಒಣಗಿದ ಮರಗಳ ತೆರವಿಗೆ ಪಾಲಿಕೆ ನಿರ್ಲಕ್ಷ ವಹಿಸುತ್ತಿದೆ. ಮಲ್ಲೇಶ್ವರಂ ಟೆಂಪಲ್ ರಸ್ತೆಯ 15 ನೇ ಮುಖ್ಯ ರಸ್ತೆಯಲ್ಲಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಪಕ್ಕದಲ್ಲೆ ಈಗಾಗಲೇ ಒಂದು ಮರ ಧರೆಗೆ ಉರುಳಿದೆ.

ಇನ್ನೇರಡು ಬೃಹತ್ ಗಾತ್ರದ ಮರಗಳ ಬುಡ ಸಮೇತ ಕಾಣುತ್ತಿದ್ದು ಯಾವಾಗ ಬೀಳುತ್ತೊ ಅನ್ನೊ ಆತಂಕ ಎದುರಾಗಿದೆ. ಜಯನಗರ ಮಹಾಕವಿ ಕುವೆಂಪು ಪಾರ್ಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಒಣಗಿದ ಮರಗಳಿವೆ

ಇಷ್ಟೆಲ್ಲ ಆದ್ರು ಕೂಡ ಒಣಗಿದ ಮರಗಳ ತೆರವಿಗೆ ಮುಂದಾಗದ ಪಾಲಿಕೆ ಅಸಡ್ಡೆಗೆ ಬೆಂಗಳೂರು ಜನತೆ ಆಕ್ರೋಶ ಹೊರ ಹಾಕುತ್ತಿದ್ದು, ನಗರದಲ್ಲಿ‌ ಈ ಎಲ್ಲ ಸಮಸ್ಯೆಗಳು ಬಗೆ ಹರಿಯಬೇಕೆಂದ್ರೆ ಪಾಲಿಕೆ‌ ಚುನಾವಣೆ‌ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನೂ ನಗರದಲ್ಲಿ ರಾಜಕಾಲುವೆ ಹಾಗೂ ಮಳೆಯಿಂದ ಆಗಿರುವಂತಹ ಅವಾಂತರ ಕುರಿತಂತೆ ಸಿಎಂ ಸಿದ್ಧರಾಮಯ್ಯ ಸೂಚನೆ ಹಿನ್ನಲೆ ಬಿಬಿಎಂಪಿ ಕಂಟ್ರೋಲ್ ರೂಂ ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿ ನೀಡಿದ್ರು.

ಇದೇ ವೇಳೆ ರಾಜಕಾಲುವೆ ನಿರ್ವಹಣೆ, ಮರ ತೆರವು ಸೇರಿ ಮಳೆ ಅವಾಂತರಗಳಿಗೆ ಟೆಕ್ನಾಲಜಿ ಮೂಲಕ ಪರಿಹಾರ ಕೊಡಲು ಕ್ರಮಕ್ಕೆ ಸೂಚನೆ ನೀಡಿದ್ರು.

ಒಟ್ಟಿನಲ್ಲಿ ಮಳೆ ಕಡಿಮೆ ಆದ್ರು ಸಿಲಿಕಾನ್ ಸಿಟಿಯಲ್ಲಿ ಅವಾಂತರಗಳು ಮಾತ್ರ ನಿಲ್ಲುತ್ತಿಲ್ಲ.‌ ಹೀಗಿರುವಾಗ ಒಣಗಿದ ಮರ ಹಾಗೂ ಈಗ್ಲೊ ಆಗ್ಲೊ ಬೀಳೊ ಹಂತದಲ್ಲಿರುವ ಮರಗಳನ್ನ ಗುರುತಿಸಿ ಅವುಗಳ ತೆರವಿಗೆ ಪಾಲಿಕೆ ಮುಂದಾಗಬೇಕಿದೆ. ಇಲ್ಲಾಂದ್ರೆ ಅಪಾಯ ಫಿಕ್ಸ್ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...