ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

Date:

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ವಾಯು ಗುಣಮಟ್ಟ ಕುಸಿಯುತ್ತಿದ್ದು, ವಾಯುಮಾಲಿನ್ಯ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದೊಂದು ದಿನ ದೆಹಲಿಯಂತೆ ನಗರದಲ್ಲೂ ಉಸಿರಾಡುವುದೇ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಿನ್ನೆ (ಡಿ.12) ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175ಕ್ಕೆ ತಲುಪಿದ್ದು, ಇಂದು ಅದು ಮತ್ತಷ್ಟು ಏರಿಕೆ ಕಂಡು 186ರಿಂದ 206ರ ವರೆಗೂ ದಾಖಲಾಗಿದೆ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಉಸಿರಾಟದ ಸಮಸ್ಯೆ ಇರುವವರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, PM2.5 ಪ್ರಮಾಣ 5 ಮೈಕ್ರೋಗ್ರಾಮ್‌ಗಿಂತ ಹೆಚ್ಚಾದರೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಭಾರತದಲ್ಲಿ ಸುರಕ್ಷಿತ ಮಿತಿಯಾಗಿ PM2.5 ಪ್ರಮಾಣವನ್ನು 40 ಮೈಕ್ರೋಗ್ರಾಮ್‌ಗಿಂತ ಕಡಿಮೆ ಇರಬೇಕು ಎಂದು ನಿಗದಿಪಡಿಸಲಾಗಿದೆ. PM10 ಪ್ರಮಾಣ 50 ಮೈಕ್ರೋಗ್ರಾಮ್‌ವರೆಗೆ ಸ್ವೀಕಾರಾರ್ಹವಾಗಿದೆ.

ಆದರೆ ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 95 ಮೈಕ್ರೋಗ್ರಾಮ್‌ ಹಾಗೂ PM10 ಪ್ರಮಾಣ 96 ಮೈಕ್ರೋಗ್ರಾಮ್‌ ಆಗಿದ್ದು, ಇದು ಸುರಕ್ಷಿತ ಮಿತಿಯನ್ನು ಮೀರಿದೆ. ಇದರಿಂದಾಗಿ ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಕಣಗಳು ವಾಹನಗಳ ಹೊಗೆ, ಕೈಗಾರಿಕಾ ವಾಯುಮಾಲಿನ್ಯ ಹಾಗೂ ಇಂಧನದ ದಹನದಿಂದ ಉತ್ಪತ್ತಿಯಾಗುತ್ತವೆ. PM10 ಕಣಗಳು ನಿರ್ಮಾಣ ಕಾಮಗಾರಿಗಳ ಧೂಳು, ಮಣ್ಣಿನ ಕಣಗಳು ಹಾಗೂ ಪರಾಗದಿಂದ ಉಂಟಾಗುತ್ತವೆ. ಈ ಕಣಗಳ ಪ್ರಮಾಣ ಮಿತಿಯನ್ನು ಮೀರಿದಾಗ ಆಸ್ತಮಾ ಸೇರಿದಂತೆ ವಿವಿಧ ಉಸಿರಾಟದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದರ ಜೊತೆಗೆ ಕಾರ್ಬನ್ ಮೊನಾಕ್ಸೈಡ್, ಓಜೋನ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್‌ಗಳ ಹೆಚ್ಚಳವೂ ಗಾಳಿಯ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸುತ್ತಿದೆ. ಸದ್ಯ ಬೆಂಗಳೂರು ಮಾತ್ರವಲ್ಲದೆ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲೂ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತ ಕಂಡಿದೆ.

Share post:

Subscribe

spot_imgspot_img

Popular

More like this
Related

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ! ನಿಂಬೆಹಣ್ಣು ಕೇವಲ ರಸಕ್ಕಾಗಿ...

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ- ಸಚಿವ ಬಿ.ಎಸ್.ಸುರೇಶ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ- ಸಚಿವ ಬಿ.ಎಸ್.ಸುರೇಶ್ ಬೆಳಗಾವಿ: ಧಾರವಾಡ ಜಿಲ್ಲೆಯ...