ಬೆಂಗಳೂರಿನಲ್ಲಿ ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವು..!
ಬೆಂಗಳೂರು: ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ರಾತ್ರಿ ಒಂಬತ್ತು ಗಂಟೆಗೆ ನಡೆದಿದೆ. ಸುಮತಿ(34), ಸೋನಿ (35) ಮೃತ ಮಹಿಳೆರಾಗಿದ್ದು,
ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಜೆಸಿಬಿ ಲೈಟ್ ಕಂಬಕ್ಕೆ ತಾಕಿದ್ದು ಕಂಬ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಮೇಲೆ ಬಿದ್ದಿದೆ. ಲೈಟ್ ಕಂಬ ಏಕಾಏಕಿ ಬಿದ್ದಿದ್ದರಿಂದ ಮಹಿಳೆಯರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.. ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುದ್ದಗುಂಟನಪಾಳ್ಯದಲ್ಲಿ ಘಟನೆ ನಡೆದಿದೆ.