ಹಾಡಹಗಲೇ ಬೆಂಗಳೂರಿನಲ್ಲಿ ರೌಡಿ ಶೀಟರ್ ಲಕ್ಷ್ಮಣ್ ಅವರ ಹತ್ಯೆಯಾಗಿದೆ ,ನಿನ್ನೆ ಬೆಳಿಗ್ಗೆ ರಾಜಾಜಿನಗರದ ಇಸ್ಕಾನ್ ಸಮೀಪ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಣರನ್ನು ಬೆನ್ನಟ್ಟಿದ ರೌಡಿಗಳು , ಕಾರಿನಲ್ಲಿದ್ದ ಲಕ್ಷ್ಮಣನ ಮೇಲೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ . ರೌಡಿ ಶೀಟರ್ ಲಕ್ಷ್ಮಣನ ಮೇಲೆ 32 ಕೇಸುಗಳು ದಾಖಲಾಗಿವೆ ಎಂದು ಹೇಳಲಾಗಿದೆ , ಎರಡು ದಿನದ ಹಿಂದೆಯಷ್ಟೇ ಜೈಲಿನಿಂದ ಮರಳಿದ ಲಕ್ಷ್ಮಣನನ್ನು ಹಾಡಹಗಲೇ 5 ಜನ ದುಷ್ಕರ್ಮಿಗಳು ರಸ್ತೆಯ ಮಧ್ಯೆ ಹೊಡೆದು ಹಾಕಿದ್ದಾರೆ ,ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ .

