ಬೆಂಗಳೂರು: ಸಿಲಿಂಡರ್ ಸ್ಪೋಟ, ಯುವಕ ಗಂಭೀರ!
ಬೆಂಗಳೂರು:- ಸಿಲಿಂಡರ್ ಸ್ಪೋಟವಾಗಿ ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಎಸ್ ಜಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪವನ್ ಗಾಯಗೊಂಡಿರುವ ಯುವಕ ಎನ್ನಲಾಗಿದೆ. ಹೊಟೇಲ್ ಒಂದರಲ್ಲಿ ಪವನ್ ಕೆಲಸ ಮಾಡುತ್ತಿದ್ದ. ಬೆಳಗ್ಗೆ ವಾಸವಿದ್ದ ರೂಂ ನಲ್ಲಿ ಟೀ ಮಾಡಲು ಮುಂದಾಗಿದ್ದಾಗ ಸಿಲಿಂಡರ್ ಸ್ಫೋಟವಾಗಿದೆ.
ಗಾಯಾಳು ಪವನ ವಿಕ್ಡೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆ ಸಂಬಂದ ಎಸ್ ಜಿಪಾಳ್ಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.