ಸಿಸಿಬಿ ಪೊಲೀಸರಿಂದ ರೇಸ್ ಕೋರ್ಸ್ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿಸಿಬಿ ತಂಡದ ವಿಶೇಷ ವಿಚಾರಣೆ ದಳದವರು ದಾಳಿ ಮಾಡಿದ್ದು, ಅಧಿಕೃತವಾಗಿ ಬೆಟ್ಟಿಂಗ್ ಆಡ್ತಾರೆ. ಅದರ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಯಾವುದೇ ಡಾಕ್ಯುಮೆಂಟ್ ರೆಸಿದಿ ಇಟ್ಟುಕೊಳ್ಳದೆ ಹಣದ ವ್ಯವಹಾರ ಕೂಡ ನಡೆಸಲಾಗುತ್ತಿತ್ತು. ಈ ಹಿನ್ನೆಲೆ ದಾಳಿ ಮಾಡಿ ಮೂರು ಕೋಟಿ 45 ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ಅದಲ್ಲದೆ 66 ಜನರನ್ನು ಕಾಡಿಗೆ ಕರೆಸಿ ಮಾಹಿತಿ ಪಡೆದು ಅವರಿಗೆ ನೋಟಿಸ್ ನೀಡಲಾಗಿದ್ದು, 41 ಅಡಿ ನೋಟಿಸ್ ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದು ಇದರ ಲಾಭ ಯಾರು ಪಡೆದುಕೊಳ್ಳುತ್ತಿದ್ದಾರೆ ಇದರ ಹಿಂದೆ ಯಾರಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಈ ರೀತಿ ಅಕ್ರಮ ಬೆಟ್ಟಿಂಗ್ ನಿಂದ ಜಿಎಸ್‌ಟಿಗೆ ವಂಚನೆ ಆಗುತ್ತಿದೆ. ಆದ್ದರಿಂದ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬೀ ದಯಾನಂದ್ ಹೇಳಿಕೆ ನೀಡಿದ್ದಾರೆ