ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಇಲ್ಲಿವೆ.!
ತುಪ್ಪವನ್ನು ಕೇವಲ ಆಹಾರದ ರುಚಿಗಾಗಿ ಮಾತ್ರ ಬಳಸುವುದಿಲ್ಲ, ಆಯುರ್ವೇದದಲ್ಲಿಯೂ ಇದನ್ನು ಪ್ರಮುಖ ಔಷಧವೆಂದು ಪರಿಗಣಿಸಲಾಗಿದೆ. ಶುದ್ಧ ದೇಸಿ ತುಪ್ಪವು ಹೃದಯದ ಆರೋಗ್ಯದಿಂದ ಹಿಡಿದು ಚರ್ಮ, ಕೂದಲು, ಜೀರ್ಣಕ್ರಿಯೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಲಾಭಕಾರಿಯಾಗಿದೆ.
ವೈದ್ಯರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದರಿಂದ ಈ ಕೆಳಗಿನ ಪ್ರಯೋಜನಗಳು ದೊರೆಯುತ್ತವೆ:
ತೂಕ ಇಳಿಸುವಲ್ಲಿ ಸಹಾಯಕ
ತುಪ್ಪದಲ್ಲಿ ಇರುವ ಬ್ಯುಟರಿಕ್ ಆಮ್ಲ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕ. ಜೀರಿಗೆ ಪುಡಿಯೊಂದಿಗೆ ತಿಂದರೆ ತೂಕ ಇಳಿಕೆ ಇನ್ನಷ್ಟು ವೇಗವಾಗಿ ನಡೆಯಬಹುದು.
ಚರ್ಮಕ್ಕೆ ಹೊಳಪು
ಕೊಬ್ಬಿನಾಮ್ಲಗಳು ಚರ್ಮವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುತ್ತವೆ. ಇದರಿಂದ ಸೂಕ್ಷ್ಮ ರೇಖೆಗಳು, ಸುಕ್ಕುಗಳು ಕಡಿಮೆಯಾಗುತ್ತವೆ.
ಕೂದಲು ಮೃದುವಾಗಿ, ಹೊಳೆಯುವಂತೆ
ನೈಸರ್ಗಿಕ ಕಂಡೀಷನಿಂಗ್ ಗುಣದಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ, ಕೂದಲಿಗೆ ಹೊಳಪು ಬರುತ್ತದೆ.
ಕೀಲು ನೋವಿನಿಂದ ರಿಲೀಫ್
ಉರಿಯೂತ ವಿರೋಧಿ ಗುಣದಿಂದ ಕೀಲು ನೋವು ಕಡಿಮೆಯಾಗುತ್ತದೆ, ಮೂಳೆಗಳು ಬಲವಾಗುತ್ತವೆ.
ಹೃದಯಕ್ಕೆ ಲಾಭ
ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಿ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಕರುಳನ್ನು ನಯಗೊಳಿಸಿ, ಮಲಬದ್ಧತೆ ಹಾಗೂ ಉಬ್ಬುವಿಕೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಆರೋಗ್ಯ ತಜ್ಞರು ಹೇಳುವಂತೆ, ತುಪ್ಪವನ್ನು ಅತಿಯಾಗಿ ಸೇವಿಸದೆ, ಮಿತ ಪ್ರಮಾಣದಲ್ಲಿ ಸೇವಿಸಿದರೆ ಅದರ ಆರೋಗ್ಯ ಲಾಭಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ.