ಬೇಡ ಅಂತ ಎಸೆದಿದ್ದ ಮೊಬೈಲ್ ಕವರ್ ಕೋಟಿಗೆ ಬೆಲೆಬಾಳ್ತು..!

Date:

ಬರ್ಲಿನ್: ಒಮ್ಮೊಮ್ಮೆ ಯಾರೂ ಊಹಿಸಲಾರದ ವಿಚಿತ್ರ ಘಟನೆಗಳು ನಡೆದುಬಿಡುತ್ತವೆ. ಯಾವುದನ್ನು ಕಸ ಎಂದು ಅಂದುಕೊಂಡಿರುತ್ತೇವೋ ಅದೇ ರಸವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುವಾಗಿ ಬಿಡುತ್ತದೆ.

ಅಂಥದ್ದೇ ಒಂದು ಕಸ ಇದೀಗ ಲಕ್ಷ ಅಲ್ಲ ಕೋಟಿ ಬೆಲೆ ಬಾಳಿದೆ! ಅದೂ ಬೇಡ ಎಂದು ಬೀಸಾಡಿದ ಮೊಬೈಲ್​ ಕವರ್​ ಎಂದರೆ ನಂಬುವಿರಾ?
ನಂಬಲೇಬೇಕು. ಏಕೆಂದರೆ ಇದು ನಡೆದಿರುವುದು ಜರ್ಮನಿಯಲ್ಲಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರಿ ವೈರಲ್​ ಆಗಿದ್ದು, ಎಲ್ಲರೂ ಅಚ್ಚರಿ ಪಡುವಂಥಾಗಿದೆ. ಜರ್ಮನಿಯ ಬಿಯಾಂಕಾ ಕ್ಲಾಸನ್‌ ಎಂಬ 27 ವರ್ಷದ ಯೂ-ಟ್ಯೂಬರ್​ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾನು ನೀರಿನೊಳಗಿನಿಂದ ಮೊಬೈಲ್​ ಮೂಲಕ ಫೋಟೋ ತೆಗೆಯಲು ಹೋಗಿದ್ದೆ. ಆಗ ನೀರಿನೊಳಗಿನ ಮೊಬೈಲ್​ ಬಿದ್ದು ಅದರ ಕವರ್ ಸಂಪೂರ್ಣ ಹಾಳಾಗಿ ಹೋಯ್ತು. ಅದನ್ನು ಬೀಸಾಕಬೇಕೆಂದು ಅಂದುಕೊಂಡಿದ್ದೆ. ಆದರೆ ನೆನಪಾಗದೇ ಅದನ್ನು ಕಪಾಟಿನ ಯಾವುದೋ ಮೂಲೆಯಲ್ಲಿ ಇಟ್ಟು ಮರೆತುಬಿಟ್ಟಿದ್ದೆ.

ಇದಾಗಿ ಅನೇಕ ದಿನಗಳೇ ಕಳೆದಿವೆ. ಈಗ ಏನನ್ನೋ ಹುಡುಕುವಾಗ ಅಕಸ್ಮಾತ್ತಾಗಿ ಈ ಫೋನ್​ ಕವರ್​ ಕಣ್ಣಿಗೆ ಬಿತ್ತು. ಎಸೆಯುವ ಎಂದುಕೊಂಡೆ. ಆದರೆ ಚಿತ್ರ ವಿಚಿತ್ರ ಡಿಸೈನ್​ ಆಗಿತ್ತು. ತಮಾಷೆಗೆಂದು ಅದನ್ನು ಆನ್​ಲೈನ್​ ಮಾರುಕಟ್ಟೆ ಇ-ಬೇನಲ್ಲಿ ಪೋಸ್ಟ್ ಮಾಡಿದೆ. ಕೇವಲ 8 ತಾಸಿನಲ್ಲಿ ಅನೇಕ ಮಂದಿ ಅದನ್ನು ಖರೀದಿ ಮಾಡುವುದಾಗಿ ಹೇಳಿದ್ದು ನೋಡಿ ಅಚ್ಚರಿ ಆಗೋಯ್ತು. ಅದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಾವು ಅದನ್ನು £1,20,000ಗೆ (ಸುಮಾರು 1.19 ಕೋಟಿ ರೂಪಾಯಿ) ಖರೀದಿ ಮಾಡುವುದಾಗಿ ಬಿಡ್​ ಮಾಡಿದ್ದಾನೆ.

ನನಗಿನ್ನೂ ಅದರ ಬಗ್ಗೆ ನಂಬಿಕೆಯೇ ಬರುತ್ತಿಲ್ಲ. ಆತ ಖಂಡಿತವಾಗಿಯೂ ತಾನು ಅದನ್ನು ಖರೀದಿಸುವುದಾಗಿ ಬಿಡ್​ ಮೊತ್ತ ಕೂಗಿದ್ದಾನೆ. ಮೊದಲು ತಮಾಷೆಗೆ ಅಂದುಕೊಂಡೆ. ಆದರೆ ಅದು ನಿಜ ಎಂದು ನಂತರ ತಿಳಿಯಿತು ಎಂದಿದ್ದಾರೆ. ಬಿಡ್​ನಲ್ಲಿ ಬಂದ ಹಣವನ್ನು ಸಮಾಜ ಸೇವೆಗೆ ಬಳಸಲು ಬಿಯಾಂಕಾ ಕ್ಲಾಸನ್‌ ಯೋಜಿಸಿದ್ದರು. ಆದರೆ, ಅದಕ್ಕೆ ಶೇ.10 ರಷ್ಟು ತೆರಿಗೆ ಕಟ್ಟಬೇಕು ಎಂಬ ಮಾಹಿತಿ ಪಡೆದ ಅವರು, ಯೋಜನೆ ಕೈಬಿಟ್ಟು, ಇ-ಬೇ ಆ್ಯಪ್​ನಲ್ಲಿ ಪೋಸ್ಟ್​ ಮಾಡಿದ್ದರು.

ಕಳೆದ ಸೆಪ್ಟೆಂಬರ್​ನಲ್ಲಿ ಕೂಡ ಇಂಥದ್ದೇ ವಿಚಿತ್ರ ಘಟನೆ ನ್ಯೂಜಿಲ್ಯಾಂಡ್​ನಲ್ಲಿ ನಡೆದಿತ್ತು. ಮನೆಯಲ್ಲಿದ್ದ ಸಣ್ಣ ಗಿಡವೊಂದು ನ್ಯೂಜಿಲ್ಯಾಂಡ್ ಇ ಮಾರಾಟ ಆ್ಯಪ್​ನಲ್ಲಿ ಹಾಕಿದ್ದ ವ್ಯಕ್ತಿಯ ಬಳಿಯಿಂದ ಗಿಡವನ್ನು 4.2 ಲಕ್ಷ ರೂಪಾಯಿಗೆ ಖರೀದಿ ಮಾಡಲಾಗಿತ್ತು.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...