ಬೈಕ್ ಕಳ್ಳತನ: ಬಂಡೇಪಾಳ್ಯ ಪೊಲೀಸರ ಬಲೆಗೆ ಬಿದ್ದ ಖದೀಮ!
ಬೆಂಗಳೂರು: ಬಂಡೇಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಪ್ರದೀಪ್ ಅಲಿಯಾಸ್ ಓಎಲ್ಎಕ್ಸ್ ಪ್ರದೀಪ್ ಎಂದು ಗುರುತಿಸಲಾಗಿದೆ.
ಆರೋಪಿಯು, ಓಎಲ್ಎಕ್ಸ್ ನಲ್ಲಿ ಬೈಕ್ ಮಾರಾಟಗಾರರನ್ನು ಹುಡುಕುತ್ತಿದ್ದನು. ಟೆಸ್ಟ್ ಡ್ರೈವ್ಗೆ ಬೈಕ್ ಪಡೆಯುವ ವೇಳೆ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಅಸಲಿ ದಾಖಲೆಗಳನ್ನು ಪಡೆಯುತ್ತಿದ್ದನು. ದುಡ್ಡು ಕೊಡುವ ರೀತಿಯಲ್ಲಿ ಬಿಲ್ಡಪ್ ಕೊಟ್ಟು, ಅಸಲಿ ದಾಖಲೆಗನ್ನು ತೆಗೆದುಕೊಂಡು ಬೈಕ್ ಸಮೇತ ಪರಾರಿಯಾಗುತ್ತಿದ್ದನು.
ಆರೋಪಿ ಪ್ರದೀಪ ಕಡೂರು ಮೂಲದವನಾಗಿದ್ದು, ನೆಲಮಂಗಲದಲ್ಲಿ ನೆಲೆಸಿದ್ದಾನೆ. ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಬೈಕ್ಗಳೆಲ್ಲವೂ ಓಎಲ್ಎಕ್ಸ್ ಮೂಲಕವೇ ಬುಕ್ ಮಾಡಿ ಕದ್ದಿದ್ದ ಎನ್ನಲಾಗಿದೆ
ನಂತರ ಮೊದಲೇ ಪಡೆದಿದ್ದ ದಾಖಲಾತಿಗಳನ್ನು ಬಳಸಿಕೊಂಡು ನಕಲಿಯಾಗಿ ಸಹಿ ಮಾಡಿ ಆರ್ಟಿಒ ಮೂಲಕ ದಾಖಲೆಗನ್ನು ವರ್ಗಾವಣೆ ಮಾಡಿಸಿ ಒಳ್ಳೆಯ ದರಕ್ಕೆ ಬೇರೆಯವರಿಗೆ ಬೈಕ್ ಮಾರಾಟ ಮಾಡುತ್ತಿದ್ದನು. ತನಗೆ ಬಂದ ಹಣದಿಂದ ಶೋಕಿ ಜೀವನ ಮಾಡುತ್ತಿದ್ದ ಆಂತ ಗೊತ್ತಾಗಿದೆ.