ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅನೇಕ ಸ್ಟಾರ್ ಗಳು ರಾಜಕೀಯ ರಂಗ ಪ್ರವೇಶಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇಂದು ಕಮಲ ಹಿಡಿದಿದ್ದಾರೆ. ಬಿಜೆಪಿ ಪಾಳಯವನ್ನು ಅಧಿಕೃತವಾಗಿ ಸೇರಿದ್ದಾರೆ.
ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಗೌತಿ ಪಕ್ಷ ಸೇರಿದರು.
ಪ್ರಧಾನಿ ನರೇಂದ್ರ ಮೋದು ಅವರ ದೇಶದ ಕುರಿತ ನಿಲುವುಗಳಿಗೆ ಮನಸೋತು ಬಿಜೆಪಿ ಸೇರಿರುವುದಾಗಿ ಗೌತಮ್ ಬಿಜೆಪಿ ಸೇರಿರುವುದಾಗಿ ಹೇಳಿಕೊಂಡಿದ್ದಾರೆ.
2011ರ ವಿಶ್ವಕಪ್ ನಲ್ಲಿ ಭಾರತದ ಗೆಲುವಿನಲ್ಲಿ ಗೌತಿ ಪ್ರಮುಖ ಕೊಡುಗೆ ನೀಡಿದ್ದರು. ವಿಶ್ವ ಕ್ರಿಕೆಟ್ ಕಂಡ ಅದ್ಭುತ ಆಟಗಾರರಲ್ಲಿ ಗೌತಿ ಒಬ್ಬರು. ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಅವರೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಬ್ಯಾಟ್ ಬಿಟ್ಟ ಸ್ಟಾರ್ ಪ್ಲೇಯರ್ ಕೈಯಲ್ಲೀಗ ಕಮಲ…!
Date: