ಬ್ಯುಸಿನೆಸ್ ಮ್ಯಾನ್ ಜಗದೀಪ್ ಕೈ ಹಿಡಿದ Anchor ಚೈತ್ರಾವಾಸುದೇವನ್..!
ಕಾಮಿಡಿ ಕಿಲಾಡಿಗಳು ನಿರೂಪಕಿ, ಬಿಗ್ಬಾಸ್ ಸೀಸನ್ 7ರ ಮಾಜಿ ಸ್ಪರ್ಧಿಗೆ ಕಂಕಣ ಭಾಗ್ಯ ಕೂಡಿ ಬಂದಿರುವುದು ಎಲ್ಲಾರಿಗೂ ಗೊತ್ತಿರುವ ವಿಚಾರ, ಇಷ್ಟು ದಿನ ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದ ನಿರೂಪಕಿ ಚೈತ್ರಾ, ಇದೀಗ ತಮ್ಮ ಜೀವನದಲ್ಲಿ ಮತ್ತೊಮ್ಮೆ ಹೊಸ ಸಂಗಾತಿಯನ್ನು ಬರಮಾಡಿಕೊಂಡಿದ್ದಾರೆ.
ಈ ಬಗ್ಗೆ ಖುದ್ದು ಚೈತ್ರಾ ವಾಸುದೇವನ್ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಚೈತ್ರಾ ವಾಸುದೇವ್ ಹಾಗೂ ಎಂಜಿನಿಯರ್ ಜಗದೀಪ್ ವಿವಾಹವಾದರು. ನಿರೂಪಕಿ ಚೈತ್ರಾಗೆ ಇದು ಎರಡನೇ ವಿವಾಹ.
ಬೆಂಗಳೂರಿನಲ್ಲಿ ವಿವಾಹ ನಡೆದಿದ್ದು, ಇಂದೇ ರಿಸೆಪ್ಷನ್ ಸಹ ನಡೆಯಲಿದೆ. ಮದುವೆಗೆ ಕೆಲವು ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು. ಚೈತ್ರಾ ವಾಸುದೇವ್ ಅವರು ಕಿರುತೆರೆ ನಿರೂಪಕಿ ಆಗಿರುವ ಜೊತೆಗೆ ಉದ್ಯಮಿಯೂ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಈ ಜೋಡಿ ಪ್ಯಾರಿಸ್ಗೆ ಹೋಗಿ ಅಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ದರು.