ಬ್ರಶ್ ಮಾಡ್ದೇ ಇದ್ರೆ ಹಾರ್ಟ್ಗೆ ಪ್ರಾಬ್ಲಂ..!

Date:

ಮನುಷ್ಯನ ದೇಹದಲ್ಲಿ ಹಲ್ಲುಗಳು ಬಹು ಮುಖ್ಯ ಅಂಗ. ಹಲ್ಲು ಸರಿಯಾಗಿರದಿದ್ದರೆ ಮುಖದ ಅಂದವೇ ಹದಗೆಡುತ್ತದೆ. ಹಲ್ಲಿನ ಆರೋಗ್ಯದೆಡೆಗೆ ಎಷ್ಟು ಗಮನ ಹರಿಸಿದರೂ ಸಾಲದು. ಬರೀ ಎರಡು ಬಾರಿ ಬ್ರಷ್ ಮಾಡದಿರಷ್ಟೇ ಸಾಲದು, ಹಲ್ಲಿನ ಆರೋಗ್ಯಕ್ಕಾಗಿ ಅಗತ್ಯ ಆಹಾರವನ್ನೂ ಸೇವಿಸುವುದು ಬಹುಮಖ್ಯ. ಅಷ್ಟಕ್ಕೂ ಈ ಹಲ್ಲಿನ ಆರೋಗ್ಯದ ಬಗ್ಗೆ ಪ್ರಭಾವ ಬೀರೋ ಅಂಶಗಳು ಯಾವುವು ಗೊತ್ತಾ?
ಹಲ್ಲನ್ನು ಸರಿಯಾಗಿ ಬ್ರಶ್ ಮಾಡಲೊಪ್ಪದ ಮಕ್ಕಳು ದೊಡ್ಡವರಾದಾಗ ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚಾಗಿರುತ್ತವಂತೆ. ಹೃದಯಕ್ಕೂ, ಹಲ್ಲುಗಳಿಗೂ ಏನು ಸಂಬಂಧ ಅಂತೀರಾ ಮುಂದೆ ಓದಿ ಗೊತ್ತಾಗುತ್ತೆ.
ಹೌದು.. ಹೆಲ್ಸಿಂಕಿ ಯೂನಿವರ್ಸಿಟಿಯ ಸಂಶೋಧಕರು. ಪ್ಲೇಕ್ ಮೇಲಿರುವ ಬ್ಯಾಕ್ಟೀರಿಯಾಗಳು ಹಲ್ಲಿನ ಟಿಶ್ಯೂಗಳನ್ನು ಆವರಿಸಿಕೊಂಡಾಗ ಹಲ್ಲಿನ ಸಮಸ್ಯೆಗಳು ಆರಂಭವಾಗುತ್ತವೆ. ಕೆಲವರ ದೇಹ ಈ ಬ್ಯಾಕ್ಟೀರಿಯಾಕ್ಕೆ ಅತಿಯಾಗಿ ಸ್ಪಂದಿಸಿ ಇನ್ಫ್ಲೇಮೇಷನ್ಗೆ ಕಾರಣವಾಗಲಿದೆಯಂತೆ. ಈ ಉರಿ ನಿಧಾನವಾಗಿ ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಆಮ್ಲಜನಕಯುಕ್ತ ರಕ್ತವು ನಮ್ಮ ಅಂಗಾಂಗಗಳಿಗೆ ಹೋಗಲು ಅಡ್ಡಿಯುಂಟಾಗುತ್ತದೆ. ಪರಿಣಾಮ, ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಅಥವಾ ಅಕಾಲಿಕ ಸಾವು ಉಂಟಾಗಬಹುದು ಎಂಬುದು ಅಧ್ಯಯನ ವರದಿ ಮಾಡಿದೆ.
ಮನುಷ್ಯನ ದೇಹದಲ್ಲಿ ಎಲ್ಲವೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬ ವಿಷಯವೇ ಬಹಳ ಜಟಿಲ. ಇನ್ನಾದರೂ ಮಕ್ಕಳಿಗೆ ದಿನಕ್ಕೆರಡು ಬಾರಿ ಸರಿಯಾಗಿ ಬ್ರಶ್ ಮಾಡುವಂತೆ ತಿಳಿ ಹೇಳಿದರೆ ಮುಂದಾಗುವ ಆಪತ್ತು ಎದುರಿಸಬಹುದು.

Share post:

Subscribe

spot_imgspot_img

Popular

More like this
Related

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...