ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

Date:

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

ಬೆಂಗಳೂರು: ತಿನ್ನುವ ಬ್ರೆಡ್‌ನೊಳಗೆ ಮಾದಕವಸ್ತು ಸಾಗಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂದು ಗುರುತಿಸಲಾಗಿದೆ.

ಆರೋಪಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ಕೊಕೇನ್ ಸಾಗಾಟ ಮಾಡುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಯಾರಿಗೂ ಅನುಮಾನ ಬಾರದಂತೆ ಬ್ರೆಡ್‌ನ ಒಳಭಾಗವನ್ನು ಕತ್ತರಿಸಿ, ಅದರೊಳಗೆ ಕೊಕೇನ್ ಇಟ್ಟು ಸಾಗಾಟ ಮಾಡುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...