ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ತಮನ್ನಾ ಹೇಳಿದ್ದೇನು!?
ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ ಎಂದು ಬ್ರೇಕಪ್ ಬಗ್ಗೆ ತಮನ್ನಾ ಮೊದಲ ಬಾರಿಗೆ ಮಾತಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಮಾತನಾಡಿದ ತಮನ್ನಾ, ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೇನೆ. ನನಗೆ ಅದು ಸರಿ ಎಂದು ಅನಿಸಿದರೆ ಮಾತ್ರ ಹಂಚಿಕೊಳ್ಳುತ್ತೇನೆ. ಎಲ್ಲಿ ಯಾವ ವಿಷಯವನ್ನು ಹೇಳಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ನನ್ನ ಕಡೆಯಿಂದ ಯಾರ ಬಗ್ಗೆಯೂ ಹಾಗೂ ಯಾವುದರ ಬಗ್ಗೆಯೂ ದೂರುಗಳಿಲ್ಲ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬ್ರೇಕಪ್ ಸುದ್ದಿ ನನ್ನ ವೈಯಕ್ತಿಕ ವಿಚಾರ ಎಂದಿದ್ದಾರೆ.
ಅಂದಹಾಗೆ, ಇತ್ತೀಚೆಗೆ ರವೀನಾ ಟಂಡನ್ ಮನೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ, ವಿಜಯ್ ಮತ್ತು ತಮನ್ನಾ ಪ್ರತ್ಯೇಕವಾಗಿ ಭಾಗಿಯಾಗಿದ್ದರು. ಇದು ಇಬ್ಬರ ಬ್ರೇಕಪ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
ಇನ್ನೂ ಇತ್ತೀಚೆಗೆ ವಿಜಯ್ ಮತ್ತು ತಮನ್ನಾ 2 ವರ್ಷಗಳ ಡೇಟಿಂಗ್‌ಗೆ ಬ್ರೇಕ್ ಬಿದ್ದಿದೆ ಎಂದು ವರದಿಯಾಗಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ.